ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ನಿಧನ

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ನಿಧನ

ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ 86ನೇ ವಯಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಳ್ಳಿ ಗ್ರಾಮದಲ್ಲಿ ಇಂದು (ಡಿಸೆಂಬರ್ 16, 2024) ನಿಧನರಾಗಿದ್ದಾರೆ.

ತುಳಸಿ ಗೌಡರ ಜೀವನಚರಿತ್ರೆ:ಹಾಲಕ್ಕಿ ಗಾಂಭಾರ ಸಮುದಾಯದ ಸದಸ್ಯೆ: ಆಕೆಯ ಸುಸ್ಥಿರ ಪರಿಸರದ ಕಾರ್ಯಗಳಿಂದ ‘ಕಾಡಿನ ಎನ್‌ಸೈಕ್ಲೋಪೀಡಿಯಾ’ ಎಂಬ ಹೆಸರು ಪಡೆದಿದ್ದರು.

ಸಾಮಾಜಿಕ ಸೇವೆ: 60 ವರ್ಷಗಳ ಕಾಲ, 30,000ಕ್ಕೂ ಹೆಚ್ಚು ಸಸಿ ನೆಟ್ಟು, ಕಾಡು ಸಂರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಪುರಸ್ಕಾರಗಳು: 2021ರಲ್ಲಿ ಪದ್ಮಶ್ರೀ ಪುರಸ್ಕಾರ, 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳು.

ಪರಿಸರ ಜಾಗೃತಿ: ಕೌಟುಂಬಿಕ ಸಮಸ್ಯೆಗಳ ನಡುವೆಯೂ, ತಮ್ಮ ಬದುಕನ್ನು ಪರಿಸರ ಉಳಿಸುವುದಕ್ಕೆ ಮೀಸಲು ಮಾಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಜ್ಯ