ಬಜಪೆ: ಹೆಜ್ಜೇನು ಕಡಿತದಿಂದ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕ ಸಾವು.

ಬಜಪೆ: ಹೆಜ್ಜೇನು ಕಡಿತದಿಂದ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕ ಸಾವು.

ಬಜಪೆ: ಹೆಜ್ಜೇನು ಕಡಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕರೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ನ. 28ರಂದು ಕೊನೆಯುಸಿರೆಳೆದಿದ್ದಾರೆ.

ಪೇಜಾವರ ಪಡ್ಡೋಡಿಯ ನಿವಾಸಿ, ದಿನಪತ್ರಿಕೆ ವಿತರಕ ಪುಷ್ಪಾರಾಜ ಶೆಟ್ಟಿ (45) ಮೃತ ದುರ್ದೈವಿ.

ಪುಷ್ಪಾರಾಜ ಅವರು ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಂಜಾರು ತಾಂಗಡಿಯಲ್ಲಿ ನ. 27ರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹೆಜ್ಜೇನಿನ ಹಿಂಡು ದಾಳಿ ನಡೆಸಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಪೊರ್ಕೋಡಿ ಪರಿಸರದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಮನೆಮನೆಗೆ ದಿನಪ್ರತಿಕೆಯನ್ನು ವಿತರಿಸುತ್ತಿದ್ದರು. ಪರಿಸರದಲ್ಲಿ ಬೊಗ್ಗು ಎಂದೇ ಚಿರಪರಿತರಾಗಿದ್ದ ಅವರು ತಮ್ಮ ಗಳಿಕೆಯಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ಮೂವರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ

ರಾಜ್ಯ