ಉಳ್ಳಾಲ : ಅಪ್ರಾಪ್ತನಿಂದ ಯುವತಿಯ ಮಾನಭಂಗಕ್ಕೆ ಯತ್ನ, ಬಾಲಕ ಪೊಲೀಸ್ ವಶಕ್ಕೆ…!!

ಉಳ್ಳಾಲ : ಅಪ್ರಾಪ್ತನಿಂದ ಯುವತಿಯ ಮಾನಭಂಗಕ್ಕೆ ಯತ್ನ, ಬಾಲಕ ಪೊಲೀಸ್ ವಶಕ್ಕೆ…!!

ಅಪ್ರಾಪ್ತ ಬಾಲಕನೋರ್ವ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಳ್ಳಾಲದ (ullal) ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಬಾಲಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಉಳ್ಳಾಲ:  ಅಪ್ರಾಪ್ತ ಬಾಲಕನೋರ್ವ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಳ್ಳಾಲ ದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಬಾಲಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಯುವತಿ ನಡೆದುಕೊಂಡು ಹೋಗುವಾಗ ಸ್ಕೂಟರ್‌ನಲ್ಲಿ ಬಂದ ಅಪ್ರಾಪ್ತ ವಯಸ್ಇನ ಬಾಲಕ ಆಕೆಯ ದೇಹ ಸ್ಪರ್ಶಸಿ ಮಾನಭಂಗಕ್ಕೆ ಯತ್ನಿಸಿದ್ದ.  ಈ ಸಂದರ್ಭ ಸ್ಥಳೀಯರು ಧಾವಿಸಿ ಬಂದು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಯುವತಿ ಕೆಥೋಲಿಕ್‌ ಸಭಾದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ಕೆಥೋಲಿಕ್‌ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ ಪಾನೀರು, ಅಮ್ಮೆಂಬಳ ಚರ್ಚ್‌ ಪಾಲನ ಸಮಿತಿ ಉಪಾಧ್ಯಕ್ಷ ರೋಬರ್ಟ್‌ ಮತ್ತು ಕೆಥೋಲಿಕ್‌ ಸಭಾದ ಮುಖಂಡರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಆರೋಪಿಯನ್ನು ಹಿಡಿದು ಕೊಣಾಜೆ ಪೋಲೀಸರ ವಶಕ್ಕೆ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ

ರಾಜ್ಯ