ಹುಟ್ಟೂರಲ್ಲಿ ನಕ್ಸಲ್ ವಿಕ್ರಂ ಗೌಡ ಅಂತ್ಯಕ್ರಿಯೆ 

ಹುಟ್ಟೂರಲ್ಲಿ ನಕ್ಸಲ್ ವಿಕ್ರಂ ಗೌಡ ಅಂತ್ಯಕ್ರಿಯೆ 

ಹೆಬ್ರಿ : 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ನಕ್ಸಲ್ ವಿಕ್ರಂ ಗೌಡ ನ. 17ರಂದು ಎಎನ್ಎಫ್ ನಡೆಸಿದ ಎನ್ ಕೌಂಟರ್ ನಲ್ಲಿ ಹತನಾಗಿದ್ದು, ನ. 20 ರಂದು ಅಂತ್ಯಕ್ರಿಯೆ ನಡೆಯಿತು.

ವಿಕ್ರಂ ಎನಕೌಂಟರ್ ಆದ ಸಹೋದರನ ಮನೆ

ಪೋಸ್ಟ್ ಮಾರ್ಟಮ್ನ.17 ರಂದು ಘಟನಾ ಸ್ಥಳಕ್ಕೆ ಡಿಐಜಿ ರೂಪ ಭೇಟಿ ನೀಡಿ ಮಹಜರು ಕಾರ್ಯ ನಡೆಸಲಾಯಿತು. ನ. 18ರ ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮೃತದೇಹದ ಪೋಸ್ಟ್ ಮಾರ್ಟಮ್ ನಡೆಯಿತು. ಬಳಿಕ ಮೃತದೇಹವನ್ನು ವಿಕ್ರಂ ಗೌಡನ ತಮ್ಮ ಸುರೇಶ್ ಗೌಡ, ತಂಗಿ ಸುಗುಣ ಅವರಿಗೆ ಹಸ್ತಾಂತರಿಸಲಾಯಿತು.

ವಾಲಿದ ಆಂಬ್ಯುಲೆನ್ಸ್ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಹೆಬ್ರಿ ಮಾರ್ಗವಾಗಿ ಕೂಡ್ಲುವಿಗೆ ಸಾಗಿಸುವಾಗ ದಾರಿ‌ ಮಧ್ಯೆ ದನವೊಂದು ಅಡ್ಡ ಬಂದ‌ ಪರಿಣಾಮ ಮೃತದೇಹವಿದ್ದ ಆಂಬ್ಯುಲೆನ್ಸ್ ರಸ್ತೆ ಪಕ್ಕಕ್ಕೆ ವಾಲಿದ ಘಟನೆಯು ನಡೆಯಿತು.‌

ಅಂತ್ಯಕ್ರಿಯೆನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡ್ಲು ಪ್ರದೇಶದಲ್ಲಿರುವ ವಿಕ್ರಂ ಗೌಡನ ಮೂಲ ಮನೆಯಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭ ಕುಟುಂಬಸ್ಥರು, ಗ್ರಾಮಸ್ಥರು ಸೇರಿದ್ದರು.

ಪೀತಬೈಲಿನಲ್ಲಿ ಪ್ರೀತಂ ಗೌಡನ ಮೂವರು ಸಹೋದರರಾದ ನಾರಾಯಣ, ಜಯಂತ, ಸುಧಾಕರ ಮನೆಯಿದೆ. ನ.11 ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲರ ತಂಡ ಹೇಳಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ತಿಳಿಸಿತ್ತು.

ಈ ಬಗ್ಗೆ ಎಎನ್‌ಎಫ್‌ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಬಳಿಕ ಜಯಂತ್ ಗೌಡ ಮನೆಯಲ್ಲಿ ಕುಳಿತಿದ್ದರು. ರೇಷನ್ ಪಡೆಯಲು ಬರುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಜಯಂತ್ ಗೌಡ ಮನೆಯ ಹೊಸ್ತಿಲಲ್ಲಿ ಕುಸಿದು ಬಿದ್ದು ಪ್ರೀತಂ ಗೌಡ ಪ್ರಾಣ ಬಿಟ್ಟಿದ್ದಾನೆ

ರಾಜ್ಯ