
ಪುತ್ತೂರು : ದಕ್ಷಿಣ ಕನ್ನಡದ ಪುತ್ತೂರಿನ ಕಲ್ಲಾರೆಯ ವಸತಿ ಗೃಹದ ಮಹಡಿ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಪುತ್ತೂರು ಕಲ್ಲಾರೆ ನಿವಾಸಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ನಿಶ್ಮಾ (17 ಮೃತ ಯುವತಿಯಾಗಿದ್ದಾಳೆ. ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಪುತ್ತೂರಿನ ಕಲ್ಲಾರೆಯ ಪ್ಲಾಟ್ ನಿವಾಸಿಯಾಗಿರುವ ಹಾಗೂ ಪುತ್ತೂರಿನ ಕಮ್ಯೂನಿಟಿ ಸೆಂಟರ್ ನ ಸ್ಥಾಪಕ, ಆಕ್ರಂದನ ಸಾಕ್ಷ್ಯಚಿತ್ರ ನಿರ್ಮಿಸಿದ, ಬರಹಗಾರ ಹನೀಫ್ ಪುತ್ತೂರು ರವರ ಮಗಳು ನಿಶ್ಮಾ ತಾಯಿ ಹಾಗು ಕುಟುಂಬಸ್ಥರನ್ನು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಹೆಣ್ಮಕ್ಕಳ ಪೈಕಿ ಹಿರಿಯವಳಾದ ನಿಶ್ಮಾ ತಂದೆಯ ಹಾದಿಯಲ್ಲೇ ಮುನ್ನಡೆಯತೊಡಗಿದ್ದಳು. ಕಾಲೇಜಿನಲ್ಲಿ ಎಲ್ಲರಿಗೂ ಅಕ್ಕರೆಯ ವಿದ್ಯಾರ್ಥಿಯಾಗಿದ್ದ ಫಾತಿಮತ್ ನಿಶ್ಮಾ ವಿದ್ಯಾರ್ಥಿಗಳಿಗೆ ಮೋಟಿವೇಶನ್ ಕ್ಲಾಸ್ ಕೊಡುತ್ತಿದ್ದಳು. ತಂದೆಯವರ ಅಕ್ಷರ ಸೇವೆಯಲ್ಲಿ ಅಕ್ಕರೆಯಿಂದ ಭಾಗವಹಿಸುತ್ತಿದ್ದಳು
