ಗುರುಂಪು ಬಳಿ  ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿ ದಾಳಿ

ಗುರುಂಪು ಬಳಿ  ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿ ದಾಳಿ

ಗುರುಂಪು ಅಂಗನವಾಡಿ ಕೇಂದ್ರದ ಸಮೀಪ ಕಳೆದ ಮೂರು ದಿನಗಳ ಹಿಂದೆ ಇಬ್ಬರು ಶಾಲಾ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ವಿದ್ಯಾರ್ಥಿನಿಯ ಕಾಲಿಗೆ ಬೀದಿ ನಾಯಿ ಕಚ್ಚಿ ಗಾಯಗೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಘಟನೆ ತಡವಾಗಿ ತಿಳಿದು ಬಂದಿದೆ.

ಗಾಯ ಗೊಂಡ ವಿದ್ಯಾರ್ಥಿನಿಯರು ಗುರುಂಪು ನಿವಾಸಿ ಶರೀಫ್ ರವರ ಪುತ್ರಿ ಶಜ್ಜಾ ಫಾತಿಮ ಹಾಗೂ ಅಬುಷಾನ ಎಂದು ತಿಳಿದು ಬಂದಿದೆ.

ಘಟನೆ ವೇಳೆ ವಿದ್ಯಾರ್ಥಿನಿಯರ ಕಿರುಚಾಟ ಶಬ್ದಕೇಳಿ ಪಕ್ಕದ ಮನೆಯವರರು ಓಡಿ ಬಂದು ನಾಯಿಯನ್ನು ಓಡಿಸಿದ ಕಾರಣ ಹೆಚ್ಚಿನ ಅನಾಹುತದಿಂದ ಮಕ್ಕಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಮಕ್ಕಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದ್ದಿದ್ದು ಅಲ್ಲಿ ಚಿಕಿತ್ಸೆ ಕೊಡಿಸಲಾಗಿದೆ

ರಾಜ್ಯ