
ಸುಳ್ಯ ನಗರದಲ್ಲಿ ಸೊಳ್ಳೆ ಕಾಟ ಮಿತಿಮೀರುತ್ತಿದೆ, ಒಂದು ಕಡೆ ವಿದ್ಯುತ್ ವ್ಯತ್ಯಯ ಮತ್ತೊಂದು ಕಡೆ ಸೊಳ್ಳೆ ಕಡಿತದಿಂದಾಗಿ ನಗರ ನಿವಾಸಿಗಳು ಹಿಡಿ ಶಾಪ ಹಾಕುತ್ತಾ ಬದುಕುವ ದುಸ್ಥಿತಿ ಎದುರಾಗಿದೆ ಎಂದು ನಗರ ನಿವಾಸಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ, ದಿನೇ ದಿನೇ ಸೊಳ್ಳೆ ಕಡಿತದಿಂದಾಗಿ ಹಲವು ವಿದ್ಯಾರ್ಥಿಗಳು ಜ್ವರದಿಂದ ಕಂಗಾಲಾಗುತ್ತಿದ್ದಾರೆ.

ಫಾಗಿಂಗ್ ಮರೆತ ನಗರಾಡಳಿತ
ಪ್ರತೀ ವರ್ಷ ನಗರ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭ ಮತ್ತು ಮಳೆಗಾಲದ ಕೊನೆಯ ಅವಧಿಯಲ್ಲಿ ನಗರದಾಧ್ಯಂತ ಫಾಗಿಂಗ್ ನಡೆಸುತ್ತಿದ್ದ ನಗರಾಡಳಿತ ಈ ಬಾರಿ ಮರೆತಂತಿದೆ, ವರ್ಷಕ್ಕೆರಡು ಬಾರಿ ಫಾಗಿಂಗ್ ನಡೆಸಲಾಗುತ್ತಿದ್ದರೂ ಈ ಬಾರಿ ಒಮ್ಮೆ ಕೂಡ ಫಾಗಿಂಗ್ ನಡೆಸಲ್ಲಿಲ್ಲ ಎಂದು ಸ್ಥಳಿಯರೂ ದೂರಿಕೊಂಡಿದ್ದಾರೆ., ಈ ಬಗ್ಗೆ ಆರೋಗ್ಯ ಇಲಾಖೆಯು ಮೌನತಾಳಿದೆ, ಜನಪ್ರತಿನಿಧಿಗಳು ನಗರ ನಿವಾಸಿಗಳ ಆರೋಗ್ಯ ಕಡೆಯೂ ಗಮನ ಹರಿಸಬೇಕಾಗಿದೆ.

