.

ಸುಳ್ಯ : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪ ಪಾಲಡ್ಕದಲ್ಲಿ ರಸ್ತೆ ಬದಿಯ ಮರವೊಂದು ಮುಖ್ಯ ರಸ್ತೆಯಲ್ಲಿ ಸಂಚಾರಮಾಡುತ್ತಿದ್ದ ಪಿಕಪ್ ವಾಹನದ ಮೇಲೆ ಬಿದ್ದು ಸಂಚಾರ ಅಸ್ತವ್ಯಸ್ತವಾದ ಘಟನೆ ನ.14 ರಂದು ನಡೆದಿದೆ. ಸಂಜೆ ಸುರಿದ ಬಾರಿ ಗಾಳಿ ಮಳೆಗೆ ಘಟನೆ ಸಂಭವಿಸಿದೆ.


ಘಟನೆಯಲ್ಲಿ ವಾಹನ ಸವಾರ ಪಾರಾಗಿದ್ದು ವಾಹನಕ್ಕೆ ಹಾನಿಯಾಗಿದೆ, ರಸ್ತೆಯಲ್ಲಿ ನೂರಾರು ವಾಹನ ಸಾಲುಗಟ್ಟಿ ನಿಂತು, ಪ್ರಾಯಾಣಿಕರು ತೊಂದರೆ ಎದುರಿಸುವಂತಾಯಿತು, ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ತಂತಿ ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.ಸ್ಥಳಿಯರ ನರವಿನಿಂದ ಮರ ತೆರವು ಮಾಡಲಾಯಿತು.


