ಪಂಜದ ಬಾರ್ ಬಳಿ ಇಬ್ಬರ ನಡುವೆ ಮಾತಿನ ವಾರ್ : ಬಿಯರ್ ಬಾಟಲಿಯಿಂದ ಹಲ್ಲೆ,ಓರ್ವ ಆಸ್ಪತ್ರೆಗೆ ದಾಖಲು

ಪಂಜದ ಬಾರ್ ಬಳಿ ಇಬ್ಬರ ನಡುವೆ ಮಾತಿನ ವಾರ್ : ಬಿಯರ್ ಬಾಟಲಿಯಿಂದ ಹಲ್ಲೆ,ಓರ್ವ ಆಸ್ಪತ್ರೆಗೆ ದಾಖಲು

ಪಂಜ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಲ್ಲಿ  ಬಾಟಲಿಯಿಂದ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಈ ಘಟನೆ ಬಾರೊಂದರ ಬಳಿ ನಡೆದಿದ್ದು ಗಾಯಾಳುವಿನ ಸಂಬಂಧಿ, ಬಳ್ಪದ ವ್ಯಕ್ತಿ ಯೊಬ್ಬರು ಬಾಟಲಿಯಲ್ಲಿ ಹಲ್ಲೆ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಬಾಟಲಿಯಲ್ಲಿ ಹೊಡೆದ ರಭಸಕ್ಕೆ  ಜಗನ್ ಎಂಬವರ ಕುತ್ತಿಗೆ ಭಾಗಕ್ಕೆ ಗಾಯವಾಗಿ ಕುಸಿದು ಬಿದ್ದಿದ್ದರು.ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್ ಮೂಲ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪತ್ರಿ ನಿತ್ಯ ಈ ಗ್ಯಾಂಗ್ ಬಾರ್ ಹೊರ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು ವಾಗ್ವಾದ, ಚರ್ಚೆಗಳು ನಡೆಯುತ್ತಿತ್ತು ಎನ್ನಲಾಗಿದೆ.  ಗುರುವಾರ ಸಾಯಂಕಾಲವೂ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಹಲ್ಲೆಯ ಹಂತಕ್ಕೆ ಹೋಗಿದೆ. ಅಲ್ಲೇ ಸಿಕ್ಕ ಬಿಯರ್ ಬಾಟಲಿಯಲ್ಲಿ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. 

ರಾಜ್ಯ