ಮಂಗಳೂರು: ಆರ್ಡರ್‌ ಮಾಡಿ ಅಮೆಜಾನ್ ಕಂಪೆನಿಗೆ ವಂಚನೆ; ಇಬ್ಬರ ಬಂಧನ

ಮಂಗಳೂರು: ಆರ್ಡರ್‌ ಮಾಡಿ ಅಮೆಜಾನ್ ಕಂಪೆನಿಗೆ ವಂಚನೆ; ಇಬ್ಬರ ಬಂಧನ

ನಕಲಿ ವಿಳಾಸ ನೀಡುವ ಮೂಲಕ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್‌ ಮಾಡಿ ಅಮೆಜಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಬಂಧಿತರನ್ನು ರಾಜಸ್ಥಾನದ ರಾಜ್‌ಕುಮಾರ್‌ ಮೀನಾ ಮತ್ತು ಸುಭಾಷ್‌ ಗುರ್ಜರ್‌ ಎಂದು ಗುರುತಿಸಲಾಗಿದೆ. ಆರೋಪಿಗಳು ಅಮೆರಭಾನ್‌ ನಲ್ಲಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಆರ್ಡರ್‌ ಮಾಡುತ್ತಿದ್ದರು. ಈ ವಸ್ತುಗಳನ್ನು ಪಡೆಯಲು ಬೇರೆ ಬೇರೆ ಕಡೆಯ ಸ್ಥಳಗಳ ವಿಳಾಸ ನೀಡುತ್ತಿದ್ದರು.

ರಾಜ್ಯ