
ಎಡಮಂಗಲ ಪುಳಿಕುಕ್ಕು ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರವೊಂದು ಮುರಿದು ಬಿದ್ದು ಸವಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನುಎಡಮಂಗಲ ಗ್ರಾಮದ ದೇವಸ್ಯ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ.

ಸೀತಾರಾಮ ಗೌಡರು ಎಡಮಂಗಲದಿಂದ ಕಡಬ ಕಡೆಗೆ ಹೋಗುತ್ತಿದ್ದಾಗ ಪುಳಿಕುಕ್ಕಿನಲ್ಲಿ ಘಟನೆ ನಡೆಯಿತು.
ವಿಷಯ ತಿಳಿದ ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.

