ಸುಳ್ಯ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ದ ಸಾಂಸ್ಕೃತಿಕ  ಉತ್ಸವದ ಸಮಾರೋಪ ಸಮಾರಂಭ:ಜಾತಿ, ಪಂಥ , ಪಕ್ಷವನ್ನು ಮೀರಿ ಎಲ್ಲರನ್ನು ಸುಳ್ಯ ಶಾರದೋತ್ಸವ ಒಂದುಗೂಡಿಸಿದೆ : ಕಟೀಲ್ :ಸುಳ್ಯ ಪ್ರಕೃತಿ ಸುಂದರ ಪ್ರದೇಶ :ಡಾ. ಆರ್ ಕೆ ನಾಯರ್

ಸುಳ್ಯ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ದ ಸಾಂಸ್ಕೃತಿಕ  ಉತ್ಸವದ ಸಮಾರೋಪ ಸಮಾರಂಭ:ಜಾತಿ, ಪಂಥ , ಪಕ್ಷವನ್ನು ಮೀರಿ ಎಲ್ಲರನ್ನು ಸುಳ್ಯ ಶಾರದೋತ್ಸವ ಒಂದುಗೂಡಿಸಿದೆ : ಕಟೀಲ್ :ಸುಳ್ಯ ಪ್ರಕೃತಿ ಸುಂದರ ಪ್ರದೇಶ :ಡಾ. ಆರ್ ಕೆ ನಾಯರ್

ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಶಾರದಾಂಬೆಯ ಉತ್ಸವದಲ್ಲಿ ನಡೆಯುತ್ತಿದೆ.ಜಾತಿ, ಪಂಥ , ಪಕ್ಷವನ್ನು ಮೀರಿ ಎಲ್ಲರನ್ನು ಸುಳ್ಯ ಶಾರದೋತ್ಸವ ಒಂದುಗೂಡಿಸಿದೆ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.ಅವರು ಶ್ರೀಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ,ಸುಳ್ಯ ಶ್ರೀ ಶಾರದಾಂಬಾ ದಸರಾ‌ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ  ನಡೆದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವದ ಸಾಂಸ್ಕೃತಿಕ  ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿ.ಸುಳ್ಯದಲ್ಲಿ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ನಡೆದು ಬರುತ್ತಿದೆ, ಹಲವು ವರ್ಷಗಳಿಂದ ನಡೆದು ಬರುತ್ತಿದೆ, ಕಳೆದ ೧೫ ವರ್ಷಗಳಿಂದ ಕಾರ್ಯಕ್ರಮಕ್ಕೆ ಬರುತ್ತಿದ್ದೆ, ಮಾಜಿ ಯಾಗಿರುವುದು ಭಗಂತನ ಇಚ್ಚೆ, ಆ ಕಾರಣದಿಂದಲೇ  ಇಂದು ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತಿದೆ ಎಂದು ಹೇಳಿದರು.

ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮಾತನಾಡಿ ಪ್ರಕೃತಿ ಸುಂದರ ಪ್ರದೇಶ ಸುಳ್ಯ..,ಧಾರ್ಮಿಕ ಆಚರಣೆಗಳು ಮನೋರಂಜನೆಗಾಗಿ ಮೀಸಲಾಗದೆ, ಭಕ್ತಿಯ ಆಶ್ರಯಗಳಾಗಲಿ ಎಂದು ಅಭಿಪ್ರಾಯ ಪಟ್ಟರು.ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ಏ.ಸಿ  ಜುಬಿನ್ ಮೊಹಾಪಾತ್ರ, AOLE ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮುಖ್ಯ  ಅತಿಥಿಯಾಗಿದ್ದರು. ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಲೀಲಾಧರ.ಡಿ.ವಿ.ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್,

 ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು,ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್

 ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ,  ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಶ್ರೀ ಕಾರ್ಯದರ್ಶಿ ಎಂ.ಕೆ. ಸತೀಶ್,ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ದಸರಾ ಉತ್ಸವ ಸಮಿತಿಯ ಕೋಶಾಧಿಕಾರಿ ಸುನಿಲ್ ಕೇರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು ಸ್ವಾಗತಿಸಿದರು.ಶ್ರೀ ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಲೀಲಾಧರ.ಡಿ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ ವಂದಿಸಿದರು.ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಆರ್.ಕೆ.ನಾಯರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬಳಿಕ ಗುರು ಕಿರಣ್ ಸೇರಿದಂತೆ ಖ್ಯಾತ ಗಾಯಕರಿಂದ ಸಂಗೀತ ಸೌರಭ ನಡೆಯಿತು, ಕ್ಕಿಕ್ಕಿರಿದು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಹಾಡುಗಾರರ ದ್ವನಿಗೆ ದನಿಯಾದರು

ರಾಜ್ಯ