ಸುಳ್ಯ ದಸರಾ ಉತ್ಸವ ಶೋಭಾಯಾತ್ರೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ  ಮುರುಳ್ಯಚಾಲನೆ

ಸುಳ್ಯ ದಸರಾ ಉತ್ಸವ ಶೋಭಾಯಾತ್ರೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ  ಮುರುಳ್ಯಚಾಲನೆ

 

ಸುಳ್ಯ ದಸರಾ ಉತ್ಸವದ ಅಂತಿಮ ದಿನವಾದ ಇಂದು  ನಗರದಲ್ಲಿ  ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ ಮುರುಳ್ಯರಿಂದ ಚಾಲನೆ ನೀಡಿದ್ದಾರೆ

53ನೇ ವರ್ಷದ ಶ್ರೀ ಶಾರದಾಂಬ ಉತ್ಸವ – ಸುಳ್ಯ ದಸರಾ 2024 ಶೋಭಾಯಾತ್ರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಟ್ಯಾಬ್ಲೂ ಗಳಿದ್ದು ಆಕರ್ಷಕವಾಗಿ  ರಸ್ತೆಯಲ್ಲಿ ಸಾಗಿಬರಲಿದೆ.

ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀ ಶಾರದಾ ದೇವಿಗೆ ಪೂಜೆ ನಡೆಸಿದರು  ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಡಿ. ವಿ

ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ,   ಗೌರವಾಧ್ಯಕ್ಷ ಕೃಷ್ಣಕಾಮತ್ , ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅದ್ಯಕ್ಷ ನವೀನ್ ಚಂದ್ರ ಕೆ.ಎಸ್., ಸೇರಿದಂತೆ ಶ್ರೀ ಶಾರದಾಂಬ ದಸರಾ ಉತ್ಸವದ ಸಮೂಹ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ರಾಜ್ಯ