ಸುಳ್ಯ ಜನತಾದಳ ಪಕ್ಷದ ಕಛೇರಿಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್  ಶಾಸ್ತ್ರಿ ಜಯಂತಿ ಆಚರಣೆ

ಸುಳ್ಯ ಜನತಾದಳ ಪಕ್ಷದ ಕಛೇರಿಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್  ಶಾಸ್ತ್ರಿ ಜಯಂತಿ ಆಚರಣೆ

ರಾಷ್ಟ್ರಪಿತ ಮಹಾತ್ಮ  ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್  ಶಾಸ್ತ್ರಿ ಯವರ ಜಯಂತಿಯನ್ನು ಜನತಾದಳ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಪಕ್ಷದ ತಾಲೂಕು ಘಟಕದ  ಅಧ್ಯಕ್ಷರಾಗಿರುವ ಶ್ರೀ ಸುಕುಮಾರ್ ಕೊಡ್ತುಗುಳಿಯವರು ದೀಪ ಬೆಳಗಿಸಿ ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ  ಆತ್ಮಕಥನದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಉಪಾಧ್ಯಕ್ಷರಾಗಿರುವ  ರೋಹನ್ ಪೀಟರ್, ಪ. ಜಾತಿ ಪ ಪಂ. ಮೋರ್ಚಾ ಅಧ್ಯಕ್ಷ ಎಂ.ಬಿ. ಚೋಮ, ರಾಮಚಂದ್ರ ಬಲ್ಲಡ್ಕ ನಿಹಾಲ್  ಕೊಡ್ತುಗುಳಿ ಇವರುಗಳು ಭಾಗವಹಿಸಿದ್ದರು. ಪಕ್ಷದ  ಪ್ರಧಾನ ಕಾರ್ಯದರ್ಶಿ ರಾಕೇಶ್  ಕುಂಟಿಕಾನರವರು ಸ್ವಾಗತಿಸಿ ಎಲ್ಲರಿಗೂ ವಂದಿಸಿದರು.

ರಾಜ್ಯ