ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರ ಮನೆ  ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ  :ದೇಗುಲ ಪೂರ್ಣಗೊಳಿಸಲು ಬೇಕಿದೆ ಸಮಾಜ ಭಾಂದವರ ಹಾಗೂ ಸ್ಥಳೀಯರ ಸಹಕಾರ: 

ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರ ಮನೆ  ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ :ದೇಗುಲ ಪೂರ್ಣಗೊಳಿಸಲು ಬೇಕಿದೆ ಸಮಾಜ ಭಾಂದವರ ಹಾಗೂ ಸ್ಥಳೀಯರ ಸಹಕಾರ: 

 

 

 ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ  ಮಡಿವಾಳ ಸಮಾಜ ಭಾಂಧವರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ವೀರಭದ್ರ  ದೇವರ ದೇವಸ್ಥಾನದ ಜೀರ್ಣೋಧ್ಧಾರ ಕಾರ್ಯ ನಡೆಯುತ್ತಿದ್ದು, ಶೇ 50 ಕಾಮಗಾರಿ ಈಗಾಗಲೆ ಸಮಾಜ ಭಾಂಧವರ ಸಹಕಾರದಲ್ಲಿ ನಡೆಯುತ್ತಿದೆ, ಆದರೆ ಸುಳ್ಯ ತಾಲೂಕಿನಲ್ಲಿ ಮಡಿವಾಳ ಸಮಾಜ ಭಾಂದವರ ಮನೆ ಕೇವಲ 80 ಮಾತ್ರ ಇದ್ದು ಇದೀಗ  ದೇವಸ್ಥಾನದ  ಜೀರ್ಣೋದ್ಧಾರ ಪೂರ್ಣ ಗೊಳಿಸಲು ಜಿಲ್ಲೆಯಲ್ಲಿರುವ ಸಮಾಜ ಭಾಂಧವರ ಸಹಕಾರ ಮತ್ತು ಸ್ಥಳಿಯರ ಸಹಕಾರ ಬೇಕಾಗಿದೆ ಎಂದು  ತಾಲೂಕು ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೊಕ್ಕಾಡಿ ತಿಳಿಸಿದ್ದಾರೆ,

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದರು

ಪೂರ್ವಜರ ಕಾಲದಲ್ಲಿಯೇ   ಶ್ರೀ ವೀರ ಭದ್ರ   ದೇವರ ಆರಧಾನೆಯು ನಡೆಸಿಕೊಂಡು ಬರುತ್ತಿದ್ದು ,  ಪ್ರಶ್ನೆ ಚಿಂತನೆಯಂತೆ  ಹಳೆಯ  ಭಂಡಾರ ಮನೆಯನ್ನು ಕೆಡವಿ ನೂತನವಾಗಿ ದೇವಸ್ಥಾನದ  ಜೀರ್ಣೋಧ್ದಾರ ಕಾರ್ಯ ಸಾಗುತ್ತಿದೆ, ಅಂದಾಜು75  ಲಕ್ಷ  ರೂ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ 50% ಕೆಲಸಗಳು ಮುಗಿದಿದೆ ಆದರೆ ಮುಂದಿನ ಕೆಲಸಗಳಿ ಹೆಚ್ಚನ ಹಣಕಾಸು ನೆರವು ಬೇಕಾಗಿದೆ,  ಎಂದು ಅವರು ತಿಳಿಸಿದ್ದಾರೆ, 

 ಚಾರಿಟೇಬಲ್ ಟ್ರಸ್ಟ್ ನ ಪುಟ್ಟಣ್ಣ ಮಂಡೆಕೋಲು ಮಾತಾಡಿ , ಬಂಟ ಸಮುದಾಯ, ಮತ್ತು ಗೌಡ ಸಮುದಾಯದ ಎಲ್ಲಾ ಕಾರ್ಯಗಳಿಗೆ ಸೇವೆಯನ್ನು ಮಾಡುತ್ತಿದ್ದು ಸಮಾಜ ನಮ್ಮನ್ನು ಅತ್ಯಂತ ಗೌರವದಿಂದ ನಡೆಸುಕೊಳ್ಳುತ್ತಿದೆ, ನಮ್ಮ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲು ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು 

ಸುದ್ದಿಗೋಸ್ಟಿಯಲ್ಲಿ, ಆನಂದ ಹೆಚ್ ,ಹಿಮಕರ ಮಂಡೆಕೋಲು, ಉಮೇಶ್, ಲೋಕೇಶ್, ಯಶೋಧರ, ಹೇಮ ಕುಮಾರ ಮೊದಲಾದವರಿದ್ದರು.

ರಾಜ್ಯ