ಸುಳ್ಯ : ಬೈಕ್ ಮೇಲೆ ಜಿಗಿದ ಕಡವೆ, ಸವಾರ ಗಂಭೀರ ಗಾಯ..

ಸುಳ್ಯ : ಬೈಕ್ ಮೇಲೆ ಜಿಗಿದ ಕಡವೆ, ಸವಾರ ಗಂಭೀರ ಗಾಯ..

ಸುಳ್ಯ :   ಸಂಚರಿಸುತ್ತಿದ್ದ ಬೈಕ್ ಮೇಲೆ ಕಡವೆಯೋಮದು  ಜಿಗಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ  ಭಾನುವಾರ ರಾತ್ರಿ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ನಡೆದಿದೆ. 

ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಎಂಬವರು ಗಾಯ ಗೊಂಡ ಸವಾರರಾಗಿದ್ದಾರೆ. ತನ್ನ  ಮನೆಯಿಂದ ಪಂಜ ಕಡೆ ಹೋಗುತ್ತಿದ್ದಾಗ  ಜಳಕದಹೊಳೆ ಎಂಬಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.ಬೈಕ್ ಸವಾರನ ಕೈ,ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಡಬದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ರಾಜ್ಯ