
ಸುಬ್ರಹ್ಮಣ್ಯ ಬಿಸಿಲೆಯಿಂದ ಸುಳ್ಯಕ್ಕೆ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುಸ್ಲಿಂ ಯುವಕನಿಗೆ ವಿದ್ಯಾರ್ಥಿನಿಯ ಸಹಪಾಠಿಗಳು ಹಲ್ಲೆ ನಡೆಸಿದ ಆರೋಪದಲ್ಲಿ ಆತ ಸುಳ್ಯ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ತೆರಳಿ ಕೇರಳದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಘಟನೆಗೆ ಸಂಬಂದಿಸಿ ಸುಳ್ಯ ಪೋಲಿಸ್ ಅಧಿಕಾರಿಗಳು ಹಲವು ಯುವಕರನ್ನು ವಿಚಾರಣೆಯ ಕರೆಸಿದ್ದರು.ಈ ಯುವಕರನ್ನು ಬಿಡಿಸಲು ಬಂದ ಹಿಂದೂ ಸಂಘಟನೆ ಪ್ರಮುಖ ಕಾರ್ಯಕರ್ತನನ್ನು ಪೋಲಿಸರು ಬಂಧನ ಮಾಡಿ, ನ್ಯಾಯಾಂಗ ಬಂಧನ ಆಗುವಂತೆ ಪೋಲಿಸ್ ಅಧಿಕಾರಿಗಳು ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿ ಇಂದು ಮುಂಜಾನೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ವಿದ್ಯಾರ್ಥಿನಿ ನೀಡಿದ ದೂರಿಗೆ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಕೇವಲ ಹಿಂದೂ ಯುವಕರನ್ನು ಮಾತ್ರ ಸುಳ್ಳು ಕೇಸು ದಾಖಲಿಸಿ ಬಂಧಿಸಿದ್ದಾರೆಂದು, ಸರಕಾರ ಹಾಗೂ ಪೋಲೀಸರ ವಿರುದ್ಧ ಪರಿವಾರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು ಇಂದು ಸುಳ್ಯ ನಗರದಲ್ಲಿ ಹಠಾತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.ಈ ಎಲ್ಲಾ ಬೆಳವಣಿಗೆ ಇದೀಗ ಸೂಕ್ಷ್ಮ ಪ್ರದೇಶ ಸುಳ್ಯದಲ್ಲಿ ಬಾರೀ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.