ದನಗಳ್ನು ಹತ್ಯೆಗೈದು ತೋಟದೊಳಗೆ ಮಾಂಸ ತಯಾರಿ : ದಾಳಿ ವೇಳೆ ಓಡಿ ತಪ್ಪಿಸಿಕೊಂಡಿದ್ದ ಐವರ ವಿರುದ್ದ ಪ್ರಕರಣ ದಾಖಲು.

ದನಗಳ್ನು ಹತ್ಯೆಗೈದು ತೋಟದೊಳಗೆ ಮಾಂಸ ತಯಾರಿ : ದಾಳಿ ವೇಳೆ ಓಡಿ ತಪ್ಪಿಸಿಕೊಂಡಿದ್ದ ಐವರ ವಿರುದ್ದ ಪ್ರಕರಣ ದಾಖಲು.

  ದನಗಳ್ನು ಹತ್ಯೆಗೈದು ಅಡಿಕೆ ತೋಟದೊಳಗೆ ಮಾಂಸ ತಯಾರಿಮಾಡುತ್ತಿದ್ದ ಸಂದರ್ಭ ಪೋಲಿಸ್ ದಾಳಿಯಾಗಿದ್ದು ಈ ಸಂದರ್ಭ ಓಡಿ ಪರಾರಿಯಾಗಿದ್ದ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ  ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಬಳಿಯ ಕಜೆ ಎಂಬಲ್ಲಿರುವ ಮಹಿಳೆಯೊಬ್ಬರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ ಈ ಕೃತ್ಯದಲ್ಲಿ ಆರೋಪಿಗಳಾದ ರಫೀಕ್, ನಝೀರ್, ಉಬೈದ್, ಅಶ್ರಫ್ ಹಾಗೂ ನಿಜಾಮುದ್ದೀನ್ ಎಂಬವರು ಭಾಗಿಯಾಗಿದ್ದು, ಇವರು ಪೊಲೀಸ್ ದಾಳಿಯ ಸಂದರ್ಭ ಓಡಿ ತಪ್ಪಿಸಿಕೊಂಡಿದ್ದರು

ಸೆ.21ರಂದು ಸ್ಥಳಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳದಿಂದ 96 ಕೆ.ಜಿ. ದನದ ಮಾಂಸ, ದೇಹದ ಅಂಗಾಂಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟ್ರಾನಿಕ್ ತೂಕದ ಯಂತ್ರ, ಎರಡು ಅಟೋ ರಿಕ್ಷಾ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು.

 ಆರೋಪಿಗಳ ಮೇಲೆ 107/2024 ಕಲಂ: 12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 3(5) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಿದ್ದಾರೆ

ರಾಜ್ಯ