ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಸಾರ್ವಜನಿಕ ಸಭೆ ಹಾಗೂ ಮಿಲಾದ್ ಸಂದೇಶ ಪ್ರಭಾಷಣ :ಮನುಷ್ಯರಾಗಿ ಹುಟ್ಟಿದವರು ಎಲ್ಲರೂ ಸಹೋದರತೆಯಿಂದ ಬದುಕಬೇಕು:-ಶ್ರೀಮದ್ ಸ್ವಾಮಿ ಆತ್ಮಾದಾಸ್ ಯಾಮಿ

ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಸಾರ್ವಜನಿಕ ಸಭೆ ಹಾಗೂ ಮಿಲಾದ್ ಸಂದೇಶ ಪ್ರಭಾಷಣ :ಮನುಷ್ಯರಾಗಿ ಹುಟ್ಟಿದವರು ಎಲ್ಲರೂ ಸಹೋದರತೆಯಿಂದ ಬದುಕಬೇಕು:-ಶ್ರೀಮದ್ ಸ್ವಾಮಿ ಆತ್ಮಾದಾಸ್ ಯಾಮಿ

ಮನುಷ್ಯರಾಗಿ ಹುಟ್ಟಿದವರು ಎಲ್ಲರೂ ಸಹೋದರತೆ ಯಿಂದ ಬದುಕಬೇಕು, ಪ್ರೀತಿ , ಕರುಣೆ, ವಿಶ್ವಾಸಗಳಿಂದ  ಬದುಕಿ ಸಹೋದರತ್ವದ  ಮಾನಸಿಕ ಪರಿವರ್ತನೆ ಎಲ್ಲರಲ್ಲಿಯೂ ಬರಬೇಕು ಎಂದು ಸಮನ್ವಯ ಗಿರಿ ಅಧೀನ ಮಠದ ಶ್ರೀಮದ್ ಸ್ವಾಮಿ ಆತ್ಮಾದಾಸ್ ಯಾಮಿ ಹೇಳಿದ್ದಾರೆ.  ಅವರು ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ  ನಡೆದ  ಮಿಲಾದ್ ಸಂದೇಶ   ಕಾರ್ಯಕ್ರಮದ ಅಂಗವಾಗಿ ಸೆ. 20 ರಂದು

ಸುಳ್ಯದ ಗಾಂಧೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಕೆಟ್ಟದ್ದನ್ನು ವಿರೋಧಿಸಿ ತಪ್ಪನ್ನು ತಪ್ಪು ಎಂದು ಹೇಳುವವರು ಮಾತ್ರ  ಭೋಧನೆ ಮಾಡಲು ಅರ್ಹರು. ಅಲ್ಲದೇ ದೇವರ ಹೆಸರಿನಲ್ಲಿ ತಪ್ಪನ್ನೆ ಮಾಡುವವರನ್ನು ಜನರು ಎಂದಿಗೂ ಸ್ಮರಿಸುವುದಿಲ್ಲ,ಜಾತಿ, ಧರ್ಮ ಎಂಬ ಕಟ್ಟುಪಾಡುಗಳು ಇಲ್ಲದೆಯೂ ಈ ಜಗತ್ತಿನಲ್ಲಿ ಬದುಕಬಹುದು ಧರ್ಮ ನೆಲೆ ನಿಲ್ಲಲು ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಪ್ರವಾದಿಯ ಸ್ಮರಣೆ ಅಗತ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಲಾದ್ ಸಮಿತಿ ಅಧ್ಯಕ್ಷ ಶರೀಫ್ ಕಂಠಿ ವಹಿಸಿ ಸರ್ವರನ್ನು ಸ್ವಾಗತಿಸಿದರು.

ಸಂಚಾಲಕರಾದ ಉಮ್ಮರ್ ಕೆ ಎಸ್ ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಇಂದಿನ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದ ಸಂಪ್ರದಾಯ ಮತ್ತು ಸೌಹಾರ್ದತೆಯನ್ನು ತಿಳಿಸಲು ಸಾಧ್ಯವಾಗಿದೆ.ನಮ್ಮ ಕಲೆಯಲ್ಲಿ ಮುಖ್ಯವಾದ ದಫ್ ಗಳ ಪ್ರದರ್ಶನ ಮಾಡುವ ಮೂಲಕ ಇಂದು ಸುಳ್ಯದಲ್ಲಿ ಇಸ್ಲಾಂ ಸೌಹಾರ್ದತೆಯನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.

ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ರವರು ಪ್ರಾರ್ಥನೆ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ವೇದಿಕೆಯಲ್ಲಿ ಮುಸ್ಲಿಮ್ ಧಾರ್ಮಿಕ ಪಂಡಿತರು ವಾಗ್ಮಿಗಳಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝೖನಿ ಖಾಮಿಲ್ ಸಖಾಫಿ, ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು ರವರು ಉಪಸ್ಥಿತರಿದ್ದು ಪ್ರವಾದಿಯವರು ಲೋಕಕ್ಕೆ ಸಾರಿದ ಶಾಂತಿ ಸಂದೇಶ ಮತ್ತು ಸೌಹಾರ್ದತೆಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪ್ರಮುಖರಾದ ಸಯ್ಯಿದ್ ಹುಸೈನ್ ತಂಙಳ್ ಆದೂರು, ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್,ಹಾಜಿ ಮುಸ್ತಫಾ ಜನತಾ,ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಹಾಜಿ ಮಹಮ್ಮದ್ ಕೆ ಎಂ ಎಸ್,ಹಾಜಿ ಅಬ್ದುಲ್ ಮಜೀದ್ ಜನತಾ, ವಕೀಲ ಪವಾಝ್ ಕನಕಮಜಲು, ಎ.ಬಿ.ಅಶ್ರಫ್ ಸಅದಿ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು,ಆದಂ ಹಾಜಿ ಕಮ್ಮಾಡಿ,ಇಸ್ಮಾಯಿಲ್ ಪಡ್ಡಿನಂಗಡಿ, ಮಹಮ್ಮದ್ ಕುಂಞ ಗೂನಡ್ಕ,ಶಾಹುಲ್ ಹಮೀದ್ ಕುತ್ತಮೊಟ್ಟೆ,ಅಬೂಬಕ್ಕರ್ ಪೂಪಿ, ಇಬ್ರಾಹಿಂ ಪಿ ಪೈಚಾರ್, ಲತೀಫ್ ಹರ್ಲಡ್ಡ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದ‌ರ್ ಹಾಜಿ ಬಾಯಂಬಾಡಿ, ಎಸ್.ಸಂಶುದ್ದೀನ್ ಅರಂಬೂರು, ಹಮೀದ್ ಬೀಜಕೊಚ್ಚಿ,ಹಾಜಿ ಅಬ್ದುಲ್ ರಝಕ್ ರಾಜಧಾನಿ ಮೊದಲಾದವರು ಉಪಸ್ಥಿತರಿದ್ದರು.ಸಮಿತಿಯ ಉಪಾಧ್ಯಕ್ಷರುಗಳಾದ ಸಿದ್ದೀಕ್ ಕೊಕ್ಕೊ, ಜುನೈದ್ ಎನ್ ಎ, ರಶೀದ್ ಜಟ್ಟಿಪಳ್ಳ, ಸಂಚಾಲಕ ಅಬ್ದುಲ್ ಕಲಾಂ, ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀಜ್ ಸಂಗಮ್, ಕಾರ್ಯದರ್ಶಿ ಗಳಾದ ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ, ನವಾಜ್ ಪಂಡಿತ್, ಕಲಂದರ್ ಎಲಿಮಲೆ, ಹಾಗೂ ಸರ್ವ ಸದಸ್ಯರುಗಳು ಸಹಕರಿಸಿದರು

ರಾಜ್ಯ