ಸುಳ್ಯ,ಪುತ್ತೂರು,ಮಂಗಳೂರು, ಮಣಿಪಾಲ,, ಸೇರಿದಂತೆ ಕರಾವಳಿ ಕರ್ನಾಟಕಕ್ಕೆ  ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಪ್ರಮುಖ  ಪೆಡ್ಲರ್ ಪೋಲಿಸ್ ಬಲೆಗೆ.ಉಪ್ಪಳ ಪತ್ವಾಡಿ ಮನೆಯಲ್ಲಿ 3.5 ಕೋಟಿ ರೂ. ಬೆಲೆಯ ಎಂಡಿಎಂಎ ಮತ್ತು ಗಾಂಜಾ  ಪತ್ತೆ.

ಸುಳ್ಯ,ಪುತ್ತೂರು,ಮಂಗಳೂರು, ಮಣಿಪಾಲ,, ಸೇರಿದಂತೆ ಕರಾವಳಿ ಕರ್ನಾಟಕಕ್ಕೆ  ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಪ್ರಮುಖ  ಪೆಡ್ಲರ್ ಪೋಲಿಸ್ ಬಲೆಗೆ.ಉಪ್ಪಳ ಪತ್ವಾಡಿ ಮನೆಯಲ್ಲಿ 3.5 ಕೋಟಿ ರೂ. ಬೆಲೆಯ ಎಂಡಿಎಂಎ ಮತ್ತು ಗಾಂಜಾ  ಪತ್ತೆ.

 

 

ಕಾಸರಗೋಡು :   ಸುಳ್ಯ,ಪುತ್ತೂರು,ಮಂಗಳೂರು, ಮಣಿಪಾಲ,, ಸೇರಿದಂತೆ ಕರಾವಳಿ ಕರ್ನಾಟಕಕ್ಕೆ  ಗಾಂಜಾ ಸಪ್ಲೈ ಮಾಡುತ್ತಿದ್ದ ಪ್ರಮುಖ  ಪೆಡ್ಲರ್ ನನ್ನು  ಪೋಲಿಸರು ಮಾಲು ಸಮೇತ ಬಂಧಿಸಿದ್ದಾರೆ.   ಉಪ್ಪಳದ ಮನೆಯೊಂದಕ್ಕೆ ಡಿವೈಎಸ್ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ   ದಾಳಿ ನಡೆಸಿ ಸುಮಾರು 3.5 ಕೋಟಿ ರೂ. ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. 

ಉಪ್ಪಳ ಪತ್ವಾಡಿ ಕೊಂಡೆವೂರು ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು ವಶಪಡಿಸಿಕೊಳ್ಳ ಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯ ಮಾಲೀಕ ಅಸ್ಕರ್ ಅಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ. 30 ರಂದು ಮೇಲ್ಪರಂಬದಲ್ಲಿ ಎಂಡಿಎಂಎ ಸಹಿತ ಅಬ್ದುಲ್ ರಹೀಂ ಎಂಬಾತನು ರವಿ ಎನ್ನುವ ಹೆಸರಿನಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ಮಾಡುತ್ತಿದ್ದಾಗ ಬಂಧಿಸಲಾಗಿತ್ತು. ಈತನನ್ನು ವಿಚಾರಣೆಗೊಳಪಡಿಸಿದಾಗ ಮಂಗಳೂರು, ಮಣಿಪಾಲ, ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಸಪ್ಲೈ ಮಾಡುವುದಾಗಿ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಲಭಿಸಿದ ಖಚಿತ ಮಾಹಿತಿಯಂತೆ ಉಪ್ಪಳದ ಮನೆಗೆ ದಾಳಿ ನಡೆಸಲಾಗಿದೆ.

ಕಾರ್ಡ್ ಬೋರ್ಡ್ ಪೆಟ್ಟಿಗೆಯಲ್ಲಿರಿಸಲಾಗಿದ್ದ ಸುಮಾರು 3.5 ಕೋಟಿ ರೂ. ಬೆಲೆಯ ಮೂರು ಕಿಲೋ ಎಂಡಿಎಂಎ ಹಾಗೂ ಒಂದು ಕಿಲೋ ಗಾಂಜಾ ವನ್ನು ವಶಪಡಿಸಿ ಕೊಳ್ಳಲಾಗಿದೆ. ಇದಲ್ಲದೆ ಹಲವಾರು ಮಾದಕ ದ್ರವ್ಯ ಹಾಗೂ ಮಾತ್ರೆಯನ್ನು ವಶಪಸಿಕೊಳ್ಳಲಾಗಿದೆ, ಹಲವು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿ ಮಾದಕ ವಸ್ತು ವಹಿವಾಟು ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ರಾಜ್ಯ