
ಮಂಗಳೂರು: ಭಜರಂಗದಳ-ವಿ.ಎಚ್.ಪಿ ಯಿಂದ ಬಿ.ಸಿ.ರೋಡ್ ಚಲೋ ಕರೆ ಹಿನ್ನಲೆಯಲ್ಲಿ ಬಿ.ಸಿ.ರೋಡ್ ನಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯುಸಿದ್ದಾರೆ.

ಕೇಸರಿ ಶಾಲು ಹಾಕಿ ಅಲ್ಲಲ್ಲಿ ಕಾರ್ಯಕರ್ತರು ಜಾಮಾಯಿಸುತ್ತಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾರ್ಯಕರ್ತರ ಜೊತೆ ಎಸ್ಪಿ ಯತೀಶ್ ಮಾತುಕತೆ ನಡೆಸಿದ್ದು, ಸ್ಥಳದಿಂದ ತೆರಳುವಂತೆ ಮನವೊಲಿಸಲು ಯತ್ನಿಸಿದ್ದಾರೆ.