ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ 

ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ 

ಸುಳ್ಯ, ೦೫  ಸಪ್ಟೆಂಬರ್ ೨೦೨೪ : ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಡಾ| ಸರ್ವಪಲ್ಲಿ ರಾಧಾಕೃಷ್ಣ ಇವರನ್ನು ಸ್ಮರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಸೇವೆ ಸಾಕಷ್ಟಿದೆ  ಎಂದು ಶುಭಹಾರೈಸಿದರು. ನಂತರ ಉಪಪ್ರಾಂಶುಪಾಲೆ ಡಾ. ಶೈಲಾ ಪೈ ಮಾತನಾಡಿ ಶುಭಹಾರೈಸಿದರು.  ಎಲ್ಲಾ ಶಿಕ್ಷಕರಿಗೆ ಹಲವು ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.  ಈ ಸಂದರ್ಭದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರುಗಳು, ಪ್ರ‍್ರಾಧ್ಯಾಪಕರುಗಳು, ವಿದ್ಯಾರ್ಥಿಗಳು,  ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಡಾ. ಭೂಮಿಕಾ ಆರ್ ಶೆಟ್ಟಿ ನೆರವೇರಿಸಿ, ಸ್ವಾಗತವನ್ನು ಭೂಮಿಕಾ ಎಸ್ ಹಾಗೂ ಧನ್ಯವಾದವನ್ನು ಡಾ. ಅನುಜ್ಞಾ ಬಿ.ಎಂ. ನಿರ್ವಹಿಸಿದರು. ಡಾ. ಫಾತಿಮಾ ಶಿದಾ ಹಾಗೂ ಡಾ. ಆಯಿಶಾರೌಹಾ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ