ಪುತ್ತೂರು ಬಿ ಜೆಪಿ ಮುಖಂಡನ ಆಡಿಯೋ ವೈರಲ್  ಬೆನ್ನಲ್ಲೆ ಮಹಿಳೆಗೆ ಬೆದರಿಕೆ ಕರೆ : ತಡರಾತ್ರಿ ಠಾಣೆಗೆ ಬಂದ ಮಹಿಳೆ

ಪುತ್ತೂರು ಬಿ ಜೆಪಿ ಮುಖಂಡನ ಆಡಿಯೋ ವೈರಲ್  ಬೆನ್ನಲ್ಲೆ ಮಹಿಳೆಗೆ ಬೆದರಿಕೆ ಕರೆ : ತಡರಾತ್ರಿ ಠಾಣೆಗೆ ಬಂದ ಮಹಿಳೆ

 

 

ಪುತ್ತೂರು : ಪುತ್ತೂರು ಬಿಜೆಪಿ ಮುಖಂಡ ಮತ್ತು ಮಹಿಳೆ ಜೊತೆ ಸಂಭಾಷಣೆಯ ಆಡಿಯೋ ವೈರಲ್ ಗೆ ಸಂಬಂಧಿಸಿದಂತೆ ಬೆದರಿಕೆ ಕರೆ ಬರುತ್ತಿರುವುದಾಗಿ ಮಹಿಳೆಯೊಬ್ಬರು ನಿನ್ನೆ ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದಿದ್ದು, ಇನ್‍ ಸ್ಪೆಕ್ಟರ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆಡಿಯೋ ವೈರಲ್ ಬಳಿಕ ಮಹಿಳೆಗೆ ಹಲವಾರು ಬೆದರಿಕೆ ಕರೆ ಬಂದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ರಾತ್ರಿ ಬಂದು ಪೊಲೀಸ್ ಇನ್ಸೆಕ್ಟರ್ ಜೊತೆ ಮಾತುಕತೆ ನಡೆಸಿದ್ದಾರೆ.

ತಡರಾತ್ರಿ ಮಹಿಳೆ ಠಾಣೆಗೆ ಬಂದಿದ್ದರಿಂದ ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿದ ಪೊಲೀಸರು ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಮನೆಯ ತನಕ ಭದ್ರತೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ