ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ  –ಶಶಿಕಲಾ ನೀರಬಿದಿರೆ ಉಪಾಧ್ಯಕ್ಷರಾಗಿ ಬುದ್ದ ನಾಯ್ಕ ಅವಿರೋಧ ಆಯ್ಕೆ.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ  –ಶಶಿಕಲಾ ನೀರಬಿದಿರೆ ಉಪಾಧ್ಯಕ್ಷರಾಗಿ ಬುದ್ದ ನಾಯ್ಕ ಅವಿರೋಧ ಆಯ್ಕೆ.

ಸುಳ್ಯ‌ ನಗರ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷತೆಗೆ ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿಗಳಾದ  ಶಶಿಕಲಾ ನೀರಬಿದಿರೆ ಹಾಗೂ ಉಪಾದ್ಯಕ್ಷರಾಗಿ ಬುದ್ದ ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ, ಹಲವು ಸುಮಯಗಳಿಂದ ತೆರವಾಗಿದ್ದ ಸುಳ್ಯನಗರ ಪಂಚಾಯತ್  ಅದ್ಯಕ್ಷ, ಉಪಾಧ್ಯಕರ ಹುದ್ದೆಗೆ ಅ.29 ರಂದು ಚುನಾವಣೆ ನಡೆದಿದೆ.

ಬಿಜೆಪಿಯಿಂದ ಅಧ್ಯಕ್ಷತೆಗೆ ಶಶಿಕಲಾ‌ ನೀರಬಿದಿರೆ, ಉಪಾಧ್ಯಕ್ಷತೆ ಬುದ್ದ ನಾಯ್ಕರ ಹೆಸರುಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ ಕಾಂಗ್ರೇಸ್ 

ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿರಲಿಲ್ಲ, 24 ಸದಸ್ಯರಲ್ಲಿ ಇಬ್ಬರು ಗೈರು ಹಾಜರಾಗಿದ್ದರು. ಎಲ್ಲಾ ಪ್ರಕ್ರೀಯೆಗಳ ಬಳಿಕ ಚುನಾವಣಾ ಕಣದಲ್ಲಿ ಅಂತಿಮವಾಗಿ   ಶಶಿಕಲಾ ನೀರಬಿದಿರೆ, ಬುದ್ದ ನಾಯ್ಕ ಚುನವಾಣಾ ಕಣದಲ್ಲಿದ್ದುದರಿಂದ ಅವಿರೋದ ಆಯ್ಕೆ  ನಡೆಸಲಾಯಿತು, ತಹಶಿಲ್ದಾರ್ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಸಂಸದ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ  ಹಲವಾರು ಬಿಜೆಪಿ ಮುಂಖಡರು ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯ