ಉಡುಪಿ : ನಿಯಂತ್ರಣ ಕಳಕೊಂಡು ಕಾರುಗಳ ಡಿಕ್ಕಿ, ಕಾರು ವಿದ್ಯುತ್ ಟ್ರಾನ್ಸ್‌ಫಾರ್ಮರಲ್ಲಿ ಸಿಲುಕಿಕೊಂಡ ಕಾರುಗಳು : ಪ್ರಯಾಣಿರು ಪಾರು..!

ಉಡುಪಿ : ನಿಯಂತ್ರಣ ಕಳಕೊಂಡು ಕಾರುಗಳ ಡಿಕ್ಕಿ, ಕಾರು ವಿದ್ಯುತ್ ಟ್ರಾನ್ಸ್‌ಫಾರ್ಮರಲ್ಲಿ ಸಿಲುಕಿಕೊಂಡ ಕಾರುಗಳು : ಪ್ರಯಾಣಿರು ಪಾರು..!

.

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ರಿಡ್ಜ್ ಕಾರೊಂದು ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಉಡಪಿ ಮಣಿಪಾಲ ಈಶ್ವರನಗರದಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ.

ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಬಂದ ಶಿಫ್ಟ್ ಕಾರು ಚಾಲಕನು ಗರೋಡಿ ರಸ್ತೆಯ ತೆರಳುವ ಸಲುವಾಗಿ ಒಮ್ಮೇಲೆ ಎಡಕ್ಕೆ ತಿರುಗಿದ್ದಾನೆ. ಈ ವೇಳೆ ಹಿಂದಿನಿಂದ ಅತೀ ವೇಗದಲ್ಲಿ ಬರುತ್ತಿದ್ದ ರಿಡ್ಜ್ ಕಾರು ಚಾಲಕನು ನಿಯಂತ್ರಣ ಕಳೆದುಕೊಂಡ ಪರಿಣಾಮ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಅಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ  ಆದ್ರೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಹಾನಿ ಸಂಭವಿಸಿದೆ.ಅಪಘಾತದಿಂದ ಯಾರಿಗೂ ಗಾಯಳಾದ ಬಗ್ಗೆ ವರದಿಯಾಗಿಲ್ಲ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈಶ್ವರ್ ನಗರದಲ್ಲಿ ‘ತುರ್ತು ಕಾಮಗಾರಿ ಪ್ರಗತಿಯಲ್ಲಿದೆ ನಿಧಾನವಾಗಿ ಚಲಿಸಿ’ ಎಂಬ ಬೋರ್ಡ್ ಹಾಕಲಾಗಿದೆ. ಈಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಬೋರ್ಡ್ ಹಾಕಿದ್ರೂ ವಾಹನಗಳ ವೇಗ ಮಾತ್ರ ನಿಂತಿಲ್ಲ‌..

ರಾಜ್ಯ