
ಸುಳ್ಯ: ಶ್ರೀ ಕೃಷ್ಣ ಭಜಾನ ಮಂದಿರ ಅಡ್ಡಬೈಲಿನಲ್ಲಿ ನಡೆದ ಮೊಸರು ಕುಡಿಕೆ ಉತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸುಳ್ಯದ ಅಂಬುಲೆನ್ಸ್ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಗಿದೆ.


ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಅಡ್ಡಬೈಲಿನಲ್ಲಿ ವಿವಿಧಿ ಆಟೋಟ ಸ್ಪರ್ಧೆಗಳನ್ನು ಆಯೋಜಕರು ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಳ್ಪ. ಗ್ರಾಮದ ಅಕ್ಕಿನೇನಿಯ ನಿವಾಸಿ ಆಶೋಕ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಸಂದರ್ಭ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ತಮ್ಮ ಕಾರ್ಯಾಚರಣೆಯನ್ನು ಸೇವೆಯ ರೂಪದಲ್ಲಿ ಮಾಡಿ ಶವವನ್ನು ಆ ನೀರಿನ ಸೆಳೆತವನ್ನು ಲೆಕ್ಕಿಸದೇ ಅವಿರತವಾಗಿ ಪರಿಶ್ರಮಿಸಿ ಶವವನ್ನು ಹೊರತೆಗೆದು ಅವರ ಅಂತಿಮ ಕ್ರಿಯ ವಿಧಿವಿಧಾನಗಳು ನಡೆಯುವ ತನಕ ಮನೆಯವರ ಜೊತೆಗಿದ್ದು ಓರ್ವ ಉತ್ತಮ ಸಮಾಜ ಸೇವಕನಾಗಿ ಮತ್ತೊಮ್ಮೆ ತಮ್ಮ ಸೇವಾ ಮನೋಭಾವವನ್ನು ಪ್ರದರ್ಶಿಸಿದ್ದ ಪ್ರಗತಿ ಅಂಬ್ಯಲೆನ್ಸ್ ಚಾಲಕ ಸುಳ್ಯದ ಅಚ್ಚು ಪ್ರಗತಿ

ಹುಡುಕಾಟದಲ್ಲಿ ಭಾಗವಹಿಸಿದ್ದ ಅಭಿಲಾಷ್ ಮತ್ತಪ್ಪನ್ ಆ್ಯಂಬುಲೆನ್ಸ್ ಹಾಗೂ ಚಿದಾನಂದ ಎಂ ಕೆ ಮಾಡನಮನೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


