
ಮದ್ಯರಾತ್ರಿಯ ಸಮಯದಲ್ಲಿ ಮಸೀದಿ ಆವರಣಕ್ಕೆ ನುಗ್ಗಿದ ಮೂವರು ಯುವಕರು ಮಸೀದಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಅವಾಚ್ಯಪದಗಳಿಂದ ನಿಂದಿಸಿದ್ದಲ್ಲದೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ಸುಳ್ಯ ತಾಲೂಕಿನ ಎಲಿಮಲೆ ಮಸೀದಿ ಆವರಣಕ್ಕೆ ರಾತ್ರಿ ಯುವಕರ ತಂಡ ನುಗ್ಗಿ ಬೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳ ಹೇಳಿಕೆಯಂತೆ ಮಸೀದಿ ಕಮಿಟಿಯಿಂದ ಪೊಲಿಸರಿಗೆ ದೂರನ್ನು ಸಲ್ಲಿಸಿದ್ದಾರೆ.

ಸುಳ್ಯ ಸುಬ್ರಹ್ಮಣ್ಯ ರಸ್ತೆಯ ಎಲಿಮಲೆಯ ಮಸೀದಿಯಲ್ಲಿ ಮೂವತಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು , ರಾತ್ರಿ ಅವರಿರುವ ಸ್ಥಳಕ್ಕೆ ಮೂವರು ಬೆದರಿಸಿ ಹೋಗಿದ್ದು ಮಸೀದಿ ಕಮಿಟಿ ಕೂಡಲೆ ಪೋಲಿಸ್ ಸಹಾಯವಾಣಿಗೆ ಕರೆ ಮಾಡಿದ್ದು ಸ್ಥಳಕ್ಕೆ ಕಡಬ ಪೋಲಿಸರು ರಾತ್ರಿಯೇ ಆಗಮಿಸಿದ್ದು, ಬಳಿಕ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ.
