
ಸಂಪಾಜೆ ಗ್ರಾಮದ ದೊಡ್ಡಡ್ಕ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಐವರು ಗಾಯಗೊಂಡ ಘಟನೆಗೆ ಸಂಬಂದಿಸಿ , ಗಂಭೀರ ಗಾಯಗೊಂಡ ಕಾರು ಚಾಲಕ ಇದೀಗ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ವಿರಾಜಪೇಟೆಯ 64 ವರ್ಷ ಪ್ರಾಯದ ಗಣೇಶ್ ಎಂಬವರು ಮೃತಪಟ್ಟವರು. ವಿರಾಜಪೇಟೆ ಕರ್ನಾಟಕ ಚಾಲಕ ಸಂಘದ ಸದ್ಯಸರು,ಕೊಡಗು ಖಾಸಾಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷರಾಗಿದ್ದರು

ಗಣೇಶ್ ರವರು ತಮ್ಮ ಪುತ್ರನನ್ನು ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ಪರಿಣಾಮ ಗಣೇಶ್ ರವರಿಗೆ ಎದೆಗೆ ಗಂಭೀರ ಗಾಯಗಳಾಯಿತು. ಕೂಡಲೇ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಮಗಳು ಅಳಿಯ ಮತ್ತು ಇನ್ನೋರ್ವ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ

