ಹರಿಹರ ಪಲ್ಲತ್ತಡ್ಕ   ಮೂರು ಮನೆಗಳ ಮೇಲೆ ಬಿದ್ದ ಬೃಹತ್ ಮರ :ಮನೆಯವರು ಪ್ರಾಣಾಪಯದಿಂದ ಪಾರು: ಅಪಾರ ಹಾನಿ

ಹರಿಹರ ಪಲ್ಲತ್ತಡ್ಕ   ಮೂರು ಮನೆಗಳ ಮೇಲೆ ಬಿದ್ದ ಬೃಹತ್ ಮರ :ಮನೆಯವರು ಪ್ರಾಣಾಪಯದಿಂದ ಪಾರು: ಅಪಾರ ಹಾನಿ

ಸುಳ್ಯ : ಬೃಹತ್ ಗಾತ್ರದ ಮರವೊಂದು ಮನೆಗಳ ಮೇಲೆ ಬಿದ್ದು ಅಪಾರ ಹಾನಿಯಾದ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದಿಂದ ವರದಿಯಾಗಿದೆ.  ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ  ಕಾಲೋನಿಯಲ್ಲಿರುವ ಮೂರು ಮನೆಗಳ ಮೇಲೆ  ತಡರಾತ್ರಿ ಮರ ಬಿದ್ದು ಎರಡು ಮನೆಗಳು  ಸಂಪೂರ್ಣ ಹಾನಿ ಯಾಗಿದ್ದು ಮನೆಯೊಳಗಿದ್ದವರು ತೀವ್ರ ಜಖಂಗೊಡಿದ್ದಾರೆ. ಒಂದು ಮನೆ ಭಾಗಶಃ ಹಾನಿಗೊಂಡಿದೆ. 

 ನಿನ್ನೆ ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಮನೆ ಮಂದಿ ಗಾಢ  ನಿದ್ರೆಯಲ್ಲಿದ್ದ ಸಂದರ್ಭ ಮನೆಯ ಪಕ್ಕದಲ್ಲೇ ಇದ್ದ ಮರವೊಂದು  ಏಕಾಏಕಿ  ಮನೆ ಮೇಲೆ ಬಿದ್ದಿತು. ಪರಿಣಾಮವಾಗಿ  ಐತೆ, ರವಿ, ಮಾಲತಿಯವರು ವಾಸವಿರುವ ಮನೆಯ ಛಾವಣಿ ಮತ್ತು ಗೋಡೆ ಸಂಪೂರ್ಣ ಧರಾಶಾಯಿಯಾಯಿತು. ಮನೆಯೊಳಗೆ ಮಲಗಿದ್ದ  ಐತೆ, ರವಿ, ಮಾಲತಿ, ಮಕ್ಕಳಾದ ಆದರ್ಶ ಮತ್ತು ಯಕ್ಷಿತಾ ರವರಿಗೆ ಗಾಯಗಳಾಗಿವೆ. ವಿಷಯ ತಿಳಿದು ಸೇರಿದ ಜನ ರಾತ್ರಿಯೇ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆತಂದು  ಸೇರಿಸಿದ್ದಾರೆ. 

ಪಕ್ಕದಲ್ಲಿ ಸಂಜೀವ ಎಂಬವರ ಮನೆಯಿದ್ದು ಅವರ ಮನೆಯ ಮೇಲೂ ಈ ವರದ ಗೆಲ್ಲುಗಳು ಬಿದ್ದಿದೆ. ಅದು ತಾರಸಿ ಮನೆಯಾದ ಕಾರಣ  ಮೇಲ್ಛಾವಣಿಗೆ ಹಾನಿಯಾಗಿಲ್ಲ. ಆದರೆ ಮನೆಯ ಎದುರುಗಡೆ ಸಿಟೌಟ್ ಗೆ ಹಾಕಲಾಗಿದ್ದ ಶೀಟ್ ಗಳು ಪುಡಿಯಾಗಿವೆ. ಸಂಜೀವರವರ ಬೈಕ್ ಜಖಂಗೊಂಡಿದೆ. 

 ಐತೆಯವರ ಹತ್ತಿರದ ಸಂಬಂಧಿಕರಿದ್ದ ಇನ್ನೊಂದು ಮನೆ ಕೂಡ ಸಂಪೂರ್ಣ ಹಾನಿಗೊಳಗಾಗಿದ್ದು,  ಅದರಲ್ಲಿ ಯಾರೆಲ್ಲ ಇದ್ದರೆಂಬ ಮಾಹಿತಿ ಲಭಿಸಿಲ್ಲ.

ರಾಜ್ಯ