ಭಾರತ ಮೂಲದ ಕಾಮುಕ ವೈದ್ಯನ ಕೃತ್ಯಕ್ಕೆ ಬೆಚ್ಚಿಬಿದ್ದ ಅಮೇರಿಕಾ ಪೊಲೀಸರು: ಈತನಲ್ಲಿತ್ತು ಸಾವಿರಾರು ಮಹಿಳೆಯರ, ಸಣ್ಣ ಮಕ್ಕಳ ನಗ್ನಚಿತ್ರ

ಭಾರತ ಮೂಲದ ಕಾಮುಕ ವೈದ್ಯನ ಕೃತ್ಯಕ್ಕೆ ಬೆಚ್ಚಿಬಿದ್ದ ಅಮೇರಿಕಾ ಪೊಲೀಸರು: ಈತನಲ್ಲಿತ್ತು ಸಾವಿರಾರು ಮಹಿಳೆಯರ, ಸಣ್ಣ ಮಕ್ಕಳ ನಗ್ನಚಿತ್ರ

ಸ್ನಾನಗೃಹಗಳು, ಬಟ್ಟೆ ಬದಲಾಯಿಸುವ ಪ್ರದೇಶಗಳು, ಆಸ್ಪತ್ರೆ ಕೊಠಡಿಗಳು ಅಲ್ಲದೇ ಆರೋಪಿಯ ಸ್ವಂತ ಮನೆಯಲ್ಲೂ ವಿವಿಧೆಡೆ ಹಿಡನ್ ಕ್ಯಾಮೆರಾಗಳನ್ನಿರಿಸಿ 2 ವರ್ಷದ ಸಣ್ಣಮಕ್ಕಳು ಸಹಿತ ವಯಸ್ಕರ ನಗ್ನಚಿತ್ರ ಮತ್ತು ವಿಡಿಯೋಗಳನ್ನು ಆರೋಪಿ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ. ಆಗಸ್ಟ್ 8 ರಂದು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಕೃತ್ಯದ ಬಗ್ಗೆ ಆತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪ್ರಕರಣ ಬಯಲಾಗಿದೆ. 

ವೃತ್ತಿಯಲ್ಲಿ ವೈದ್ಯನಾಗಿರುವ ಉಮೈರ್ ಎಜಾಝ್‌ನ ವಿಕೃತ ಕೃತ್ಯಕ್ಕೆ ಪೊಲೀಸರೇ ಬೆಚ್ಚಿದ್ದಾರೆ. ಆರೋಪಿಯ ಕಂಪ್ಯೂಟರ್‌ಗಳು, ಫೋನ್‌ಗಳು ಮತ್ತು 15 ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾರ್ಡ್ ಡ್ರೈವ್‌ನಲ್ಲಿ 13,000 ವೀಡಿಯೊಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ಕೌಡ್ ಸ್ಟೋರೇಜ್‌ಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

2011ರಲ್ಲಿ ಭಾರತದಿಂದ ಕೆಲಸದ ವೀಸಾದಲ್ಲಿ ಯುಎಸ್‌ಗೆ ತೆರಳಿದ ಏಜಾಝ್ ಈಗ ಅಮೆರಿಕದ ಪೌರತ್ವ ಪಡೆದಿದ್ದಾನೆ. ಸಂತ್ರಸ್ತರನ್ನು ಗುರುತಿಸಲು ಕಷ್ಟವಾಗುವುದರಿಂದ, ಜನರು ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಲು ಇಮೇಲ್ ಅನ್ನು ಪೊಲೀಸರು ಒದಗಿಸಿದ್ದಾರೆ

ರಾಜ್ಯ