ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ಉಪಾಕರ್ಮ” ವಿಶೇಷ ಕಾರ್ಯಕ್ರಮ ನಡೆಯಿತು. – 

ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ಉಪಾಕರ್ಮ” ವಿಶೇಷ ಕಾರ್ಯಕ್ರಮ ನಡೆಯಿತು. – 

ಕುಕ್ಕೆ ಸುಬ್ರಹ್ಮಣ್ಯ :ಅ,19,ಶ್ರಾವಣ ಮಾಸ, ಶುಕ್ಲ ಪಕ್ಷದ, ಹುಣ್ಣಿಮೆ ದಿವಸವಾದ ಇಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ, ಉಪಾಕರ್ಮ ಕಾರ್ಯಕ್ರಮ ನಡೆಯಿತು.

ವೇದ ಮೂರ್ತಿ ಪಂಡಿತರಾದ ಶ್ರೀ ಬಾಲಕೃಷ್ಣ ಆಚಾರ್ಯರು ಉತ್ಸರ್ಜನ ಉಪಾಕರ್ಮ ಹೋಮ ಪೂಜೆ ನೆರವೇರಿಸಿದರು.

ಸಹಾಯಕ ಅರ್ಚಕರಾಗಿ ನಾಗರಾಜ್ ಭಟ್ ಕಾರ್ಕಳ, ಅವರು ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ್ ಜೋಯಿಸ್, ಶ್ರೀ ಮಠದ ವೈದಿಕರು, ಆಚಾರ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಪಾಕರ್ಮ, ಎಂದರೇನು ?

ಉ: “ಉಪಾಕರ್ಮ” ಅಥವಾ ಉಪಕ್ರಮ ಎಂದರೆ ವೇದಾಧ್ಯಯನದ ಪ್ರಾರಂಭ.ಎಂಬ ಅರ್ಥ. ಇದನ್ನು ಜನಿವಾರದ ಹುಣ್ಣಿಮೆ -ನೂಲು ಹುಣ್ಣಿಮೆ, ಅಥವಾ ಜನಿವಾರದ ಹಬ್ಬವೆಂದು ಕೂಡ ಕರೆಯುತ್ತಾರೆ. ಉಪಾಕರ್ಮ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಸನಿಹದ ಶ್ರವಣ ನಕ್ಷತ್ರ ದಿನ ಋಗ್ವೆದಿಗಳೂ ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳೂ, ಸಾಮವೇದ ಉಪಾಕರ್ಮ ಭಾದ್ರಪದ ಮಾಸದ ಹಸ್ತಾ ನಕ್ಷತ್ರದ ದಿನವೂ ಆಚರಿಸುತ್ತಾರೆ.

ವರದಿ: ಪೋಟೋ : ಶಿವ ಭಟ್
ರಾಜ್ಯ