ಕೇನ್ಯ ನಾಪತ್ತೆಯಾಗಿದ್ದ ವ್ಯಕ್ತಿ  ಶವವಾಗಿ ಶಾಲಾ ಬಾವಿಯಲ್ಲಿ ಪತ್ತೆ .

ಕೇನ್ಯ ನಾಪತ್ತೆಯಾಗಿದ್ದ ವ್ಯಕ್ತಿ  ಶವವಾಗಿ ಶಾಲಾ ಬಾವಿಯಲ್ಲಿ ಪತ್ತೆ .

ಸುಳ್ಯ : ನಾಪತ್ತೆಯಾಗಿದ್ದ ವ್ಯಕ್ತಿಯು ಶವವಾಗಿ ಮನೆಯ ಪಕ್ಕದ ಶಾಲಾ ಬಾವಿಯಲ್ಲಿ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಕೇನ್ಯ ಬಳಿ ವರದಿಯಾಗಿದೆ. ವ್ಯಕ್ತಿಯನ್ನು

ಕೇನ್ಯ ಶಾಲೆಯ ಬಳಿಯ ನಿವಾಸಿ ಬಾಬು ಪೂಜಾರಿ ಎಂದು ತಿಳಿದುಬಂದಿದೆ. ಮುಂಜಾನೆ 3.30ರ ವೇಳೆಗೆ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಯವರು ಹುಡುಕಾಟ ನಡೆಸಿದಾಗ ಕೇನ್ಯ ಸ.ಕಿ.ಪ್ರಾ. ಶಾಲಾ ಬಾವಿ ಕಟ್ಟೆಯಲ್ಲಿ ಬಾಬು ಪೂಜಾರಿಯವರ ಲುಂಗಿ, ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಯಿತು. ಬಾವಿ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿಗೆ ದೋಟಿ ಇಳಿಸಿ ಶೋಧ ನಡೆಸಿದಾಗ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ರಾಜ್ಯ