ಸುಳ್ಯದ ಗುರುಂಪುವಿನಲ್ಲಿ ಜೀಪು ಸ್ಕೂಟರ್ ಅಪಘಾತದ ಗಾಯಾಳು ನಿಧನ

ಸುಳ್ಯದ ಗುರುಂಪುವಿನಲ್ಲಿ ಜೀಪು ಸ್ಕೂಟರ್ ಅಪಘಾತದ ಗಾಯಾಳು ನಿಧನ

.

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ಯವರು( 73) ಇಂದು  ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ

ಆ.10 ರಂದು ಬೆಳಗ್ಗೆಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಯ ಭಾಗಕ್ಕೆ ವಿಪರೀತ ಗಾಯಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ‌ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಶಶಿಧರನ್ ರವರು ಕಳೆದ ಹಲವಾರು ವರ್ಷಗಳಿಂದ ಆಲೆಟ್ಟಿಯಲ್ಲಿ ನೆಲೆಸಿದ್ದು‌ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡು ಬರುತ್ತಿದ್ದರು.

ರಾಜ್ಯ