ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಅಶೋಕ್ ಕುಮಾರ್ ರೈ ಸೂಚನೆ

ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಅಶೋಕ್ ಕುಮಾರ್ ರೈ ಸೂಚನೆ

ಮಾಣಿ- ಸಂಪಾಜೆ ರಾಷ್ಡ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ   ಹೆದ್ದಾರಿ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಶಿವಪ್ರಸಾದ್ ರವರಿಗೆ  ಸೂಚಿಸಿದ್ದಾರೆ.

 ಹೆದ್ದಾರಿ ಕಾಮಗಾರಿ ಸ್ಪೀಡಪ್ ಪಡೆಯಬೇಕಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿ  ಮುಗಿಸಬೇಕು. ವೇಗತೆಯನ್ನು ಪಡೆದುಕೊಳ್ಳದೇ ಇದ್ದರೆ ಈ ವಿಚಾರ ಆಮೆಗತಿಯಲ್ಲಿ ಸಾಗಬಹುದು, ಅದಕ್ಕಾಗಿ ಎಷ್ಟು ವೇಗವನ್ನು ಕೊಡುವುದಕ್ಕೆ ಸಾಧ್ಯವೋ ಅಷ್ಟು ವೇಗದಲ್ಲಿ ಕಾರ್ಯ ನಿರ್ವಹಿಸಬೇಕು ಇದಕ್ಕಾಗಿ ನನ್ನಿಂದ ಏನು ಸಹಾಯ ಬೇಕೋ ಅದನ್ನು ತಿಳಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ತಹಶೀಲ್ದಾರ್ ಪುರಂದರ್ ಹೆಗ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ