ಪೆರಾಜೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿದಿ ಕಾರ್ಯಕ್ರಮ.

ಪೆರಾಜೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿದಿ ಕಾರ್ಯಕ್ರಮ.

ಕೊಡಗು ಜಿಲ್ಲಾ ಕ.ಸಾ.ಪ, ಮಡಿಕೇರಿ ತಾಲೂಕು ಕ.ಸಾ.ಪ, ಸಂಪಾಜೆ ಹೋಬಳಿ ಘಟಕ ಕ.ಸಾ.ಪ, ಜ್ಯೋತಿ ವಿದ್ಯಾಸಂಘ ಇವುಗಳ ಆಶ್ರಯದಲ್ಲಿ ಜ್ಯೋತಿ ಪ್ರೌಢಶಾಲೆ ಪೆರಾಜೆ ಸಭಾಂಗಣದಲ್ಲಿ 2022 23ನೇ ಸಾಲಿನ ದಿ. ಗಂಗಾಧರ ಶೇಟ್ ಸುಲೋಚನ ಬಾಯಿ ದತ್ತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಡಾ. ಜ್ಞಾನೇಶ್ ನಿಡ್ಯಮಲೆ ಅವರು ನೆರವೇರಿಸಿದರು. ಪ್ರಸ್ತಾವಿಕ ನುಡಿಗಳನ್ನು ಹೇಳಿದ ಕೊಡಗು ಕಾ.ಸಾ.ಪ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಅವರು ತಮ್ಮ ಮಾತುಗಳಲ್ಲಿ ಗಂಗಾಧರ್ ಶೇಟ್ ಮತ್ತು ಸುಲೋಚನ ಬಾಯಿ ಅವರು ನಡೆಸಿದ್ದ ಸಾಮಾಜಿಕ ಕಾರ್ಯಗಳ ವಿವರಣೆ ನೀಡಿದರು. ದತ್ತಿ ದಾನಿಗಳಾದ ಶ್ರೀ ಎಂ.ಜಿ ಮೋಹನ್ ಅವರು ತಮ್ಮ ತಂದೆ-ತಾಯಿಯವರ ಸಾಮಾಜಿಕ ಸೇವೆಯನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಲೇಖಕರಾದ ಶ್ರೀಮತಿ ಸಹನಾ ಕಾಂತಬೈಲು ಅವರು ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟ ಅದರಲ್ಲೂ ವಿಶೇಷವಾಗಿ ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಕುರಿತಾಗಿ ವಿವರವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಗೋಪಾಲ ಪೆರಾಜೆಯವರು ಅಮರ ಸುಳ್ಯದ ಸ್ವಾತಂತ್ರ ಸಮರದಲ್ಲಿ ಭಾಗಿಯಾದ ಪೆರಾಜೆಯ ನಿಡ್ಯಮಲೆ, ಕೋಡಿ ಮನೆತನ ಮತ್ತು ಅಂದಿನ ಹೋರಾಟದಲ್ಲಿ ಶಿಕ್ಷೆಗೆ ಒಳಪಟ್ಟ ಪೆರಾಜೆಯ ಸ್ಥಾನಿಕ ಕೃಷ್ಣಯ್ಯ ಕುರಿತಾಗಿ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಕ.ಸಾ.ಪ ಮಡಿಕೇರಿ, ಶ್ರೀ ಟಿ.ಪಿ. ರಮೇಶ್ ಮಾಜಿ ಅಧ್ಯಕ್ಷರು ಕೊಡಗು ಕ.ಸಾ.ಪ, ಶ್ರೀ ಸುರೇಶ್ ಪೆರುಮುಂಡ ಸದಸ್ಯರು ಗ್ರಾಮ ಪಂಚಾಯತ್ ಪೆರಾಜೆ
ಶ್ರೀ ಲೋಕನಾಥ ಅಮಚೂರು, ಶ್ರೀ ಮುಡುಕಜೆ ಹರೀಶ್ಚಂದ್ರ,
ಶ್ರೀಮತಿ ರೇವತಿ ರಮೇಶ್, ಶ್ರೀ ನಾಗರಾಜ್ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಶಿಕ್ಷಕ ವೃಂದ ಮತ್ತು ಸಾರ್ವಜನಿಕರು ಭಾಗಿಯಾಗಿದ್ದ ಕಾರ್ಯಕ್ರಮವನ್ನು ಶ್ರೀಮತಿ ಸಂಗೀತ ರವಿರಾಜ್ ನಿರೂಪಿಸಿದರು.

ವರದಿ: ಗೋಪಾಲ ಪೆರಾಜೆ

ರಾಜ್ಯ