
ಅಡಕೆಗೆ ಭಾಧಿಸಿರುವ ಎಲೆ ಹಳದಿ, ಎಲೆ ಚುಕ್ಕಿ ರೋಗದಲ್ಲಿ ಬದುಕು ಕಟ್ಟಲು ಹೈರಾಣಾಗಿದ್ದ ರೈತರ ಬದುಕಿನಲ್ಲಿ ಮಂದಹಾಸ ಮೂಡಿಸಿದ್ದ ಇತ್ತೀಚಿನ ಬೆಳೆಯೆಂದರೆ ಅದು ಕೋಕ್ಕೋ… ಹೌದು ಕೇವಲ ಐವತ್ತು ರೂಪಾಯಿಗಳಿಗೆ ಬಿಕರಿಯಾಗುತ್ತಿದ್ದ ಹಸಿಕೊಕ್ಕೋ ಒಮ್ಮಿಂದೊಮ್ಮೆಗೆ ಮೈ ಕೊಡವಿ ಎದ್ದು ಬಲು ಬೇಡಿಕೆ ಗಿಟ್ಟಿಸಿ ಕೊಂಡಿತ್ತು. ಕಳೆದೆರಡು ತಿಂಗಳ ಹಿಂದೆ ಹಸಿ ಕೊಕ್ಕೊ 320 ಬೆಲೆಗೆ ಮಾರಾಟ ವಾಗುವುದರ ಮೂಲಕ , ತಾನೊಂದು ಕಮರ್ಷಿಯಲ್ ಬೆಳೆ ಎನ್ನುವುದನ್ನು ಸಾಭೀತು ಪಡಿಸಿತ್ತು..! ಆದರೀಗ ಕೋಕ್ಕೋ ಬೆಲೆ ತೀವ್ರ ಇಳಿಕೆ ಕಂಡಿದ್ದು, ಮತ್ತೆ ಹಳೆಯ ರೇಟೀಗೇ ಹೋಗಬಹುದೇ ಎಂಬ ಆತಂಕ ಕೊಕ್ಕೋ ಬೆಳೆಗಾರರಲ್ಲಿ ಮೂಡಿದೆ,

ಹೌದು ಚಾಕಲೇಟ್ ಉತ್ಪನ್ನಗಳನ್ನು ತಯಾರಿಸಲು ಬೇಕಾಗುವ ಕೋಕೊ ಬೆಲೆ ಇಂದು ಕೇವಲ 110…!
950 ಕ್ಕೆಮಾರಾಟವಾಗಿದ್ದ ಒಣ ಕೊಕ್ಕೊ, ಇದೀಗ300/400 ಕ್ಕೆ ಮಾರಾಟವಾಗುತ್ತಿದೆ,ಮುಂದೆ ಕೊಕ್ಕೋ ದಾರಣೆ ಏರುವುದೇ ಎಂಬ ಸಂಶಯ ಬೆಳೆಗಾರರನ್ನು ಕಾಡತೊಡಗಿದೆ.

ಕೊಕ್ಕೋ ಗಿಡಗಳಿಗೆ ಬಂದಿತ್ತು ಬಲು ಬೇಡಿಕೆ..!
ಈ ವರ್ಷ ಕೊಕೋ ದಾರಣೆ ತೀವ್ರಗೊಂಡ ಹಿನ್ನಲೆ ಕೊಕ್ಕೋ ಗಿಡಗಳಿಗೆ ಬಾರೀ ಬೇಡಿಕೆ ಕಂಡಿತ್ತು. ಈ ವರ್ಷ ಲಕ್ಷಾಂತರ ಕೊಕ್ಕೋ ಗಿಡಗಳನ್ನು ರೈತರು ತಮ್ಮ ಜಮೀನಿನಲ್ಲಿ ನೆಟ್ಟಿದ್ದು , ಇದೀಗ ದಾರಣೆ ಇಳಿಕೆಯಿಂದ ಬೆಚ್ಚಿ ಬಿದ್ದಿದ್ದಾರೆ,ಆದರೂ… ಅಡಿಕೆ ಬೆಳೆಯಲು ಆಗದ ಪ್ರದೇಶದಲ್ಲಿ ಕೊಕ್ಕೋ ಬೆಳೆದಿದ್ದ ರೈತರು ಇತ್ತೀಚಿಗಿನ ದಾರಣೆಯಿಂದ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದು ಸತ್ಯ…!

