ಮಂಗಳೂರು 40 ಮಂದಿ ವಿಚಾರಣಾಧೀನ ಕೈದಿಗಳು ಡ್ರಗ್ಸ್ ಸೇವಿಸಿರುವುದು ದೃಢ, 25 ಮೊಬೈಲ್‌ ವಶ : ಆಯುಕ್ತ ಅನುಪಮ್‌ ಅಗರ್‌ವಾಲ್‌ 

ಮಂಗಳೂರು 40 ಮಂದಿ ವಿಚಾರಣಾಧೀನ ಕೈದಿಗಳು ಡ್ರಗ್ಸ್ ಸೇವಿಸಿರುವುದು ದೃಢ, 25 ಮೊಬೈಲ್‌ ವಶ : ಆಯುಕ್ತ ಅನುಪಮ್‌ ಅಗರ್‌ವಾಲ್‌ 

ಮಂಗಳೂರು, ಆ 1 : ಜಿಲ್ಲಾ ಕಾರಾಗೃಹದ 40 ಮಂದಿ ವಿಚಾರಣಾಧೀನ ಕೈದಿಗಳು ಡ್ರಗ್ಸ್ ಸೇವನೆ ಮಾಡಿರುವುದು ಪರೀಕ್ಷೆ ವೇಳೆ ಗೊತ್ತಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಇತ್ತೀಚೆಗೆ ಜೈಲಿಗೆ ದಾಳಿ ನಡೆಸಿದಾಗ 25 ಮೊಬೈಲ್‌, ಗಾಂಜಾ ಸ್ಯಾಚೆಟ್‌ಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿರುವ 389 ವಿಚಾರಣಾಧೀನ ಕೈದಿಗಳ ಪೈಕಿ 110 ಮಂದಿಯನ್ನು ಡ್ರಗ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇದರಲ್ಲಿ 40 ಮಂದಿಯಲ್ಲಿ ಪಾಸಿಟಿವ್‌ ಬಂದಿದೆ. ಉಳಿದವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.

ರಾಜ್ಯ