ಶ್ರೀಲಂಕಾದ ರಂಗಿರಿ ದಂಬುಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳೆಯರ ಏಷಿಯಾ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಮಹಿಳಾ ತಂಡ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ನಲ್ಲಿ ಸ್ಮೃತಿ ಮಂದಾನ ಅವರ 47 ಎಸೆತದಲ್ಲಿ 60 ರನ್ ಗಳ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. 166 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.ನಂತರ ಚೇತರಿಸಿಕೊಂಡ ಶ್ರೀಲಂಕಾ ತಂಡ ನಾಯಕಿ ಚಮರಿ ಅಟಪಟ್ಟು ಮತ್ತು ಹರ್ಷಿತಾ ಸಮರವಿಕ್ರಮ ರವರ ಅದ್ಬುತ ಅರ್ಧ ಶತಕದ ಆಟದ ಮೂಲಕ 8 ವಿಕೇಟ್ ಗಳ ಜಯ ಸಾಧಿಸಿದೆ. ಶ್ರೀಲಂಕಾ ತಂಡದ ನಾಯಕಿ ಚಮರಿ ಅಟಪಟ್ಟು ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಹರ್ಷಿತಾ ಸಮರವಿಕ್ರಮ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

