ಸಂಪಾಜೆಯ ಗೂನಡ್ಕದಲ್ಲಿ ಅದ್ಧೂರಿಯಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟ

ಸಂಪಾಜೆಯ ಗೂನಡ್ಕದಲ್ಲಿ ಅದ್ಧೂರಿಯಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟ

 

 

ರೈತ ಮಕ್ಕಳಾದ ನಾವೆಲ್ಲ  ಆಟಿ ತಿಂಗಳಲ್ಲಿ ನಮ್ಮ ದೈನಂದಿನ ಬದುಕಿನ ಆಗುಹೋಗುಗಳನ್ನು ಪರಸ್ಪರ ಹಂಚಿಕೊಳ್ಳಲು ಆಟಿ ಸಂಭ್ರಮ ಅಗತ್ಯತೆ ನಮ್ಮ ಮುಂದಿದೆ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪಸರಿಸುವ ಜವಬ್ದಾರಿಯಿದೆ ಎಂದು ಡಾ. ಡಿ.ವಿ‌. ಲೀಲಾಧರ್ ಕರೆ ನೀಡಿದ್ದಾರೆ ಅವರು  ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವತಿಯಿಂದ ಆಟಿ ಸಂಭ್ರಮ – ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭದ ಅದ್ಯಕ್ಷತೆ ವಹಿಸಿ ಮತ್ತು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ,ಈ ಕ್ರೀಡಾಕೂಟ ಗ್ರಾಮಸ್ಥರನ್ನು ಒಂದು ಸೇರಿಸುವ ಕೆಲಸ ಮಾಡಿದೆ, ಈ ಸಂಭ್ರಮ  ಪ್ರತೀ ವರ್ಷ  ಸಂಪಾಜೆ ಗ್ರಾಮದ ಈ ಮಣ್ಣಿನಲ್ಲಿ ನಡೆಯುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಗೌಡ ಕೆ.ಸಿ. ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಕೂಟಕ್ಕೆ  ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ದೈವ ನರ್ತಕ ಕೇಪು ಅಜಿಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ದಾಮೋದರ ಕೆ.ಸಿ. ಅವರು ಸನ್ಮಾನಪತ್ರ ವಾಚಿಸಿದರು.

ಗ್ರಾಮದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ,‌ಪುರುಷರಿಗೆ, ದಂಪತಿಗಳಿಗೆ, 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಸಲಾಯಿತು, ಓಟ ಹಗ್ಗಜಗ್ಗಾಟ, ವಿಷವರ್ತುಲ ವಜ್ರಮುಷ್ಠಿ, ಕಾಳಗ,ಹಿಡಿಯುವ ಆಟ, ಚಮಚ-ನಿಂಬೆಹಣ್ಣಿನ ಓಟ,ಗೂಳಿ ಕಾಳಗ, ಮೂಟೆ ಹೊರುವುದು ,ಚೆಂಡಾಟ ಗುರು ಶಿಷ್ಯರು,ಕೆರೆದಡ ಮುಂತಾದ ವಿವಿಧ ಮನೋರಂಜನಾ ಆಟಗಳುನ್ನು ನಡೆಸಲಾಯಿತು ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು.ರಾತ್ರಿ8.30 ರವರೆಗೆ ಕ್ರೀಡಾಕೂಟ ನಡೆಯಿತು.

ವೇದಿಕೆಯಲ್ಲಿ ಕೆಸರುಗದ್ದೆ ಕ್ರೀಡಾ ಕೂಟದ ಗೌರವಾಧ್ಯಕ್ಷ ಲೋಕಯ್ಯ ಗೌಡ ಮಂಗಳೂರು, ಆಡಳಿತ ಮೊಕ್ತೆಸರರಾದ ನಾರಾಯಣ ಗೌಡ ಕೆ.ಸಿ. ಆಡಳಿತ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕರ್ನಾಟಕ ಸೋನಿ ಕಂಪನಿ ಸತೀಶ್ ಡಿ. ವಿ , ಹಿರಿಯ ನರ್ತಕ ಕೇಪು ಅಜಿಲ, ಪ್ರಧಾನ ಕಾರ್ಯದರ್ಶಿ ದಾಮೋದರ ಕೆ., ಸಿ., ಉಪಾಧ್ಯಕ್ಷರುಗಳಾದ ಜಗದೀಶ್ ಪಿ.ಎಲ್‌., ಜಯರಾಮ ಗೌಡ ಅಬೀರ, ಖಜಾಂಜಿ ಪ್ರಕಾಶ ಕೆ.ಪಿ., ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಧನಪಾಲ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮನೋಜ್ ಜಿ.ಎಸ್., ಕೆಸರುಗದ್ದೆ ಕ್ರೀಡಾಸಮಿತಿಯ ಗೌರವ ಸಲಹೆಗಾರ ಜಗದೀಶ್ ಕೆ.ಪಿ., ಕಾರ್ಯಾಧ್ಯಕ್ಷ ಮನೀಷ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಹಂಸರಾಜ ಕುಯಿಂತೋಡು, ಕೋಶಾಧಿಕಾರಿ ರಂಜನ್ ಕಲ್ಲುಗದ್ದೆ ಕ್ರೀಡೋತ್ಸವ ಸಮಿತಿ ಸದಸ್ಯರುಗಳಾದ ನಾಗರಾಜ ಯು.ಎಸ್., ಗಣೇಶ್ ಕಾಪಿಲ, ವರದರಾಜ್ ಸಂಕೇಶ್, ವಿಜಯ ಆಚಾರ್ಯ ಪೆರಂಗೋಡಿ, ಮಹಿಳಾ ಸಮಿತಿ ಸಂಚಾಲಕಿ ಶ್ರೀಮತಿ ರಮ್ಯಾ ನಾಗೇಶ್, ಸರಕಾರಿ ಪ್ರಥಮ ದರ್ಜೆವಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಅರಂತೋಡು ಗ್ರಾಂ. ಪಂ. ಸದಸ್ಯ ದಯಾನಂದ ಕುರುಂಜಿ, ಮೋಹನ ಪಾರೆಮಜಲು ಉಪಸ್ಥಿತರಿದ್ದರು. ವಿ ಜೆ .ವಿಖ್ಯಾತ್ ಭಾರ್ಪಣೆ ಕಾರ್ಯಕ್ರಮ ನಿರೂಪಿಸಿದರು..

ರಾಜ್ಯ