
ಆ.18 ರಂದು ಪಾಣೆಮಂಗಳೂರಿನಲ್ಲಿ ಕೆಸರ್ ದ ಕಂಡೊಡು ಗೊಬ್ಬುದ ಕೂಟ ನಡೆಯಲಿದೆ ಎಂದು ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು ತಿಳಿಸಿದ್ದಾರೆ.ಬಂಟ್ವಾಳ ತಾಲೂಕು ಪಾಣೆಮಂಗಳೂರು ನಾಯಿಲದ ಓಂ ಶ್ರೀ ಗೆಳೆಯರ ಬಳಗ ಈ ಬಾರಿ ಆ 18ರಂದು ಪುರುಷರಿಗೆ ಮುಕ್ತ ವಿಭಾಗದ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗಜಗ್ಗಾಟ.ಸ್ಥಳೀಯರಿಗೆ ವಿವಿಧ ಸಾಂಸ್ಕೃತಿಕ ಕ್ರೀಡೆಗಳು ಮತ್ತು ಮನೋರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಸಂಸದರಾದಿಯಾಗಿ ಶಾಸಕರು ವಿವಿಧ ಮುಖಂಡರು , ಚಲನ ಚಿತ್ರ ತಾರೆಯರು ಪಾಲ್ಗೊಳ್ಳಲಿದ್ದಾರೆ ಎಂದು ಕಿರಣ್ ಅಟ್ಲೂರು ತಿಳಿಸಿದ್ದಾರೆ.

