
ಎಲ್ಲಾ ರೈತಾಪಿ ವರ್ಗಕ್ಕೆ , ಅಥವಾ ವೃತ್ತಿಪರರಿಗೆ ಆಷಾಡ ಮಾಸವೆಂದರೆ ಆರ್ಥಿಕವಾಗಿ ತುಸು ಕಷ್ಟದ ದಿನಗಳೇ… ಅಲ್ಲದೇ ಆಷಾಡದಲ್ಲಿ ಅಷ್ಟಾಗಿ ಮಂಗಳಕಾರ್ಯವನ್ನು ಮಾಡುವುದಿಲ್ಲ ಹಾಗಾಗಿ ವ್ಯವಹಾರಿಕವಾಗಿಯೂ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಆರ್ಥಿಕ ಅಭಾವ ಕಾಡುವುದು ಸಹಜ…


ಆದ್ರೆ ಇಂತಹ ಅವಧಿಯಲ್ಲಿ ಅತ್ಯಂತ ಕಡಿಮೆ ಧರಕ್ಕೆ ಜವುಳಿಗಳನ್ನು ಖರೀದಿಸಬೇಕೆಂದರೆ ನಿಮಗೊಂದು ಸಂತಸದ ಸುದ್ದಿಯನ್ನು ನಾವು ಕೊಡುತ್ತೇವೆ..!

ಹೌದು ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆಷಾಡ ಮಾಸದ ಸಲುವಾಗಿ ಭಾರೀ ರಿಯಾಯಿತಿಧರದಲ್ಲಿ ಬಟ್ಟೆಗಳನ್ನು ಮಾರಾಟಮಾಡಲಾಗುತ್ತಿದೆ, ನೇರವಾಗಿ ಮಿಲ್ಲಿನಿಂದಲೇ ಖರೀದಿಸಿ ತಂದ ಹೊಸ ಬಟ್ಟೆಗಳನ್ನು ಅಲ್ಪ ಲಾಭಾಂಶದಲ್ಲಿ ಗ್ರಾಹಕರಿಗೆ ನೀಡುವ ಯೋಜನೆಯನ್ನು ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆ ಹಮ್ಮಿಕೊಂಡಿದೆ ಈಗಾಗಲೇ ಹೊಸ ಹೊಸ ವಿನ್ಯಾಸದ ಎಲ್ಲಾ ವಯಸ್ಸಿನ ಮಹಿಳೆಯರ, ಮತ್ತು ಮಕ್ಕಳಿಗೆ ಹೊಂದಿಕೆಯಾಗಬಲ್ಲ ಆಕರ್ಷಕ ವಿನ್ಯಾಸದ ಹೊಸ ಡಿಸೈನ್ ಬಟ್ಟೆಗಳು ಇಲ್ಲಿ ದಾಸ್ತಾನು ಮಾಡಲಾಗಿದ್ದು, ಗ್ರಾಹಕರೂ ಕೂಡಲೇ ಈ ಅವಕಾಶವನ್ನು ಸದುಪಯೋಗ ಪಡಿಸವಂತೆ ಸಂಸ್ಥೆಯವರು ಕೇಳಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಪುತ್ತೂರಿನ ಸಂಜೀವ ಶೆಟ್ಟಿ ಜವುಳಿಮಳಿಗೆಯಲ್ಲಿ ಆಷಾಡ ಸೇಲ್ ಹಮ್ಮಿಕೊಳ್ಳುತ್ತಿದ್ದು ಪುತ್ತೂರು ಮಾತ್ರವಲ್ಲದೆ, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ, ವಿಟ್ಲ, ಬಂಟ್ವಾಳದ ಲಕ್ಷಾಂತರ ಗ್ರಾಹಕರು ಪ್ರತೀ ವರ್ಷ ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ.ಈ ಬಾರಿ ಇನ್ನೂ ಹೆಚ್ಚಿನ ಗ್ರಾಹಕರು ಇಲ್ಲಿ ಬರುವ ನಿರೀಕ್ಷೆಯಿದೆ ಎಂದು ಸಂಸ್ಥೆ ಮಾಲಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರತಿಷ್ಟಿತ ಬ್ರಾಂಡ್ ಗಳ , ಹೊಸ ಹೊಸ ಬಟ್ಟೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬೇಕೆಂದಿದ್ರೆ ನೀವು ಇಂದೇ ಪುತ್ತೂರಿನ ಸಂಜೀವ ಶೆಟ್ಟಿ ಜವುಳಿಮಳಿಗೆಗೆ ಬೇಟಿ ನೀಡಿ.
