
ಕೆಸರು ಗದ್ದೆಯ ಕ್ರೀಡೊತ್ಸವ ಗ್ರಾಮಸ್ಥರನ್ನು ಒಗ್ಗೂಡಿಸಬಲ್ಲದೇ..?!.. ಒಗ್ಗೂಡಿಸ ಬಲ್ಲದು ಎಂಬುದನ್ನು ನಾಡಿಗೇ ತೋರಿಸಿ ಕೊಡುತ್ತಿದ್ದಾರೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮಸ್ಥರು….!


ಹೌದು ,.. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಮುಂಭಾಗದಲ್ಲಿ ಜುಲೈ 28 ನೇ ಆದಿತ್ಯವಾರದಂದು ಗ್ರಾಮಸ್ಥರು ಪ್ರಥಮ ಭಾರಿಗೆ ಆಟಿ ಸಂಭ್ರಮದ ಕೆಸರು ಗದ್ದೆ ಕ್ರೀಡೊತ್ಸವವನ್ನು ಹಮ್ಮಿಕೊಂಡಿದ್ದಾರೆ,ಮತ್ತು ಗ್ರಾಮಸ್ಥರೆಲ್ಲಾ ಶ್ರಮಸೇವೆಯನ್ನು ಮಾಡುತ್ತಾ ಸಂಭ್ರಮದಿಂದ ಕೆಸರು ಗದ್ದೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.ಸಾಮಾನ್ಯವಾಗಿ ಈ ಕೆಸರು ಗದ್ದೆ ಕ್ರೀಡೋತ್ಸವವನ್ನು ಆಟಿ ತಿಂಗಳಲ್ಲಿ ಸಂಭ್ರಮದಿಂದ ಹಲವು ಗ್ರಾಮದಲ್ಲಿರಮ ಸಂಘಟಿಸಲಾಗುತ್ತದೆ, ಇದು ಕರವಾವಳಿಯಲ್ಲಿ ಸಾಮಾನ್ಯ, ಆದರೆ ಸಂಪಾಜೆಯ ಗೂನಡ್ಕದಲ್ಲಿ ನಡೆಯುವ ಆಟಿ ಸಂಭ್ರಮದ ಕೆಸರುಗದ್ದೆ ಕ್ರೀಡೊತ್ಸವವು ಇವುಗಳಿಗಿಂತ ಬಿನ್ನ….!

ಯಾಕೆಂದ್ರೆ, ಬೇರೆ ಎಲ್ಲಾಕಡೆಗಳಲ್ಲಿ ಈ ರೀತಿ ಕ್ರೀಡೋತ್ಸವವನ್ನು ಯಾವುದೋ ಸಂಘಟನೆಯೋ ,ಯುವಕ ಮಂಡಲಗಳೋ ಅಥವಾ ಸಂಸ್ಥೆಗಳು ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮವನ್ನು ಸಂಘಟಿಸುತ್ತದೆ, ಇದು ಗ್ರಾಮಸ್ಥರಿಗೆ ಮನೋರಂಜನೆಯನ್ನು ನೀಡುತ್ತದೆ ಸತ್ಯ , ಆದರೆ ಗೂನಡ್ಕದ ಬೈಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡೋತ್ಸವವನ್ನು ಸಂಘಟಿಸಲು ಗ್ರಾಮಕ್ಕೇ ಗ್ರಾಮವೇ ಒಂದಾಗಿದೆ, ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಟೊಂಕಕಟ್ಟಿ ನಿಂತಿದ್ದಾರೆ, ಗ್ರಾಮಸ್ಥರೆಲ್ಲಾ ಸ್ಪೂರ್ತಿಯಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.

ಸಾಮಾನ್ಯವಾಗಿ ಗ್ರಾಮದ ದೇವಸ್ಥಾನದ ಜೀರ್ಣೋದ್ದಾರ, ಅಥವಾ ದೈವ ಮಹೋತ್ಸವದಲ್ಲಿ ಗ್ರಾಮಸ್ಥರ ಈ ರೀತಿಯ ಚಟುವಟಿಕೆಯನ್ನು ಕಾಣುತ್ತೇವೆ, ಆದರೇ ಸಂಪಾಜೆಯಲ್ಲಿ ಇಂತಹದ್ದೇ ಅಭಿರುಚಿಯನ್ನು ಗ್ರಾಮಸ್ಥರು ತೋರಿಸಿಕೊಡುತ್ತಿದ್ದಾರೆ, ಪಾಳು ಬಿದ್ದ ಭೂಮಿಯನ್ನು ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಗದ್ದೆಯಲ್ಲಿ ಪ್ರತಿದಿನ ಶ್ರಮಸೇವೆಯನ್ನು ಮಾಡುತ್ತಿದ್ದಾರೆ ,ಗ್ರಾಮಸ್ಥರೇ ಸೇರಿ ಕ್ರೀಡೋತ್ಸವ ಸಮಿತಿ, ಮಹಿಳಾ ಸಮಿತಿ,ಆಡಳಿತ ಸಮಿತಿ, ಕಾರ್ಯಾಕಾರಿ ಸಮಿತಿ , ಸಂಚಲನಾ ಸಮಿತಿ ರಚಿಸಿಕೊಂಡು , ಪ್ರತೀ ಮನೆಗಳಿಂದ ದಿನ ಪ್ರತಿ ಶ್ರಮ ಸೇವೆಗಳು ನಡೆಯುತ್ತಿರುವುದು ಇಲ್ಲಿಯ ವಿಶೇಷತೆ.


