
ಸುಳ್ಯ : ಸ್ಕೂಟಿಗೆಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಮತ್ತು ಸೋಣಂಗೇರಿಯ ಮಧ್ಯೆ ಸುತ್ತುಕೋಟೆ ಎಂಬಲ್ಲಿ ಸಂಭವಿಸಿದೆ.


ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.ಅವರು ನೆಲ್ಲೂರು ಕೇಮ್ರಾಜೆಯಿಂದ ಸುಳ್ಯಕ್ಕೆ ಬರುತ್ತಿದ್ದಾಗ ಎದುರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತುದ್ದ ಬಸ್ ಡಿಕ್ಕಿಯಾಗಿದೆ, ಪರಿಣಾಮ ರಸ್ತೆಗೆ ಬಿದ್ದ ರಾಮಚಂದ್ರ ಪ್ರಭು ಸ್ಥಳದಲ್ಲೇ ಸಾವನ್ನಪಿದ್ದಾರೆ.ಇವರು ಪತ್ನಿ ಉಮಾವತಿ ಸುಳ್ಯ . ಪುತ್ರ ಸಂದೀಪ್ ರನ್ನು ಅಗಲಿದ್ದಾರೆ.


