ಉಪ್ಪಿನಂಗಡಿ ಅಕ್ರಮ ಮರ ಸಾಗಾಟ:  ಸುಳ್ಯ ಮೂಲದ ಲಾರಿ ಚಾಲಕನ ಬಂಧನ.

ಉಪ್ಪಿನಂಗಡಿ ಅಕ್ರಮ ಮರ ಸಾಗಾಟ:  ಸುಳ್ಯ ಮೂಲದ ಲಾರಿ ಚಾಲಕನ ಬಂಧನ.

 

ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ನೆಲ್ಯಾಡಿ  ರಾಷ್ಟ್ರೀಯ ಹೆದ್ದಾರಿಯಲ್ಲಿ  ಯಾವುದೇ ಪರವಾನಿಗೆ ಇಲ್ಲದೇ  ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ 

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮೂಲದ ಯುವಕನ್ನನ್ನು  ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಉಪ್ಪಿನಂಗಡಿ ಸಮೀಪದಲ್ಲಿ  ಅರಣ್ಯ ಇಲಾಖಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಲಾರಿ ಸಹಿತ  ಮರದ ದಿಮ್ಮಿ ವಶಪಡಿಸಿಕೊಂಡಿದೆ. 

ಸುಳ್ಯ ತಾಲೂಕು ಅಲೆಟ್ಟಿ ನಿವಾಸಿ ನಿಖಿಲ್  ಸಂಗಮ್(26ವ.)ಬಂಧಿತ ಲಾರಿ ಚಾಲಕ. 

 ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಲಾರಿಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಮಂಗಳೂರಿನತ್ತ  ಸುಮಾರು 23 ಕಲ್ಬಾಗೆ ಮರದ ದಿಮ್ಮಿ ಗಳನ್ನು ಸಾಗಾಟ ಮಾಡಲಾಗುತ್ತಿತ್ತು.

ಇದೀಗ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಉಪ್ಪಿನಂಗಡಿ ಅರಣ್ಯ ಇಲಾಖಾಧಿಕಾರಿಗಳ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಆರ್‌ಎಫ್‌ಒ ಜಯಪ್ರಕಾಶ್ ಕೆ.ಕೆ., ಡಿಆರ್‌ಎಫ್‌ಒ ಭವಾನಿಶಂಕರ್, ಫಾರೆಸ್ಟರ್ ವಿನಯ್‌ಚಂದ್ರ, ತೇಜಕುಮಾರ್ ಹಾಗೂ ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

ರಾಜ್ಯ