
ವಿದ್ಯುತ್ ವ್ಯತ್ಯಯದಲ್ಲಿ ರಾಜ್ಯದಲ್ಲಿ ಸುಳ್ಯ ನಂಬರ್ ವನ್ ಸ್ಥಾನ ಪಡೆದರೆ…! ಸುಳ್ಯಕ್ಕೆ ಅಂಟಿಕೊಂಡಿರುವ ನೆರೆಯ ಗ್ರಾಮ ಪೆರಾಜೆ ವಿದ್ಯುತ್ ವ್ಯತ್ಯಯದಲ್ಲಿ ತಾಲೋಕಿಗೆ ಪ್ರಥಮ ಸ್ಥಾನಿಯಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿವೆ…!

ಹೌದು ಪೆರಾಜೆ ಗ್ರಾಮದಲ್ಲಿ ಹಲವು ಭಾಗಗಳಿಗೆ ಕಳೆದ ನಾಲ್ಕು ದಿನದಿಂದ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ಇಲ್ಲಿಯ ಗ್ರಾಮಸ್ಥರದು ಆಗಿದೆ ಎಂದು ತಿಳಿದು ಬಂದಿದೆ, ಪೆರಾಜೆಯ ಕುಂಡಾಡು, ಚಾಮಕಜೆ, ಕುಂಬಳಚೇರಿ, ಪೆರುಮುಂಡ ಭಾಗದವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳ ತೊಡಗಿದ್ದಾರೆ, ಪೆರಾಜೆ ಗ್ರಾಮಕ್ಕೆ ಎರಡು ಕಡೆಯಿಂದ ವಿದ್ಯುತ್ ಸಂಪರ್ಕವಿದ್ದು ಆಲೆಟ್ಟಿ ಕೂರ್ನಡ್ಕ ಭಾಗದಿಂದ ಬರುವ ವಿದ್ಯುತ್ ಮಾರ್ಗವಾಗಿ ಸಂಪರ್ಕ ಪಡೆದ ಗ್ರಾಮಸ್ಥರು ಕಳೆದ ಕೆಲವುದಿನಗಳಿಂದ ವಿದ್ಯುತ್ ಇಲ್ಲದೆ ಪರಿತಪಿಸುವ ಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.
ಇನ್ನು ಇಲ್ಲಿ ಲೈನ್ ಮ್ಯಾನ್ ಕೊರತೆಯಿದ್ದು ಬರ್ತಿಮಾಡುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಜೆ.ಇ ಯವರಿಗೆ ಮನವಿಮಾಡಿದ್ದಾರೆ ಎಂದು ತಿಳಿದು ಬಂದಿದೆ, ಒಟ್ಟಿನಲ್ಲಿ ಸಂಭಂದ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
