ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು

ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯ ಕೊಣಾಲು ಸಮೀಪ ಇಂದು ನಡೆದಿದೆ.

ಮಂಗಳೂರು ಕೋಡಿಕ್ಕಲ್ ನಿವಾಸಿ, ಬೈಕ್ ಸವಾರ ಪ್ರಣಮ್ ಕೋಟ್ಯಾನ್ ಮೃತಪಟ್ಟ ಬೈಕ್ ಸವಾರ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಪ್ರಣಮ್‍ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪ್ರಣಮ್ ಮೆಡಿಕಲ್ ರೆಪ್ರೆಸೆಂಟಿವ್ ಆಗಿ ಕೆಲಸ ಮಾಡುತ್ತಿದ್ದು, ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ನಡುವೆ ಕೊಲ್ಪೆ ಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಣಮ್ ಕೋಟ್ಯಾನ್ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟರು ಎಂದು ವರದಿಯಾಗಿದೆ.

ರಾಜ್ಯ