ಸೊಳ್ಳೆಯ ಕಾಟದಿಂದ ನಿದ್ರಿಸುತ್ತಿಲ್ಲ ಅಮರ ಪಡ್ನೂರು ಗ್ರಾಮದ ಜನ

ಸೊಳ್ಳೆಯ ಕಾಟದಿಂದ ನಿದ್ರಿಸುತ್ತಿಲ್ಲ ಅಮರ ಪಡ್ನೂರು ಗ್ರಾಮದ ಜನ

ರಾಜ್ಯದಲ್ಲಿ ಡೆಂಘೀ ಮಹಾಮಾರಿ ಹೆಚ್ಚುತ್ತಿರುವ ಕಥೆ ಒಂದೆಡೆಯಾದರೆ ಸುಳ್ಯದ ಪ್ರತಿಷ್ಟಿತ ಊರಾದ ಅಮರ ಪಡ್ನೂರು ಗ್ರಾಮದಲ್ಲಿ ಸೊಳ್ಳೆಯ ಕಾಟದಿಂದಾಗಿ ಜನರ ವ್ಯಥೆ ಹೇಳತೀರದಾಗಿದೆ. ರಾತ್ರಿ ಹೊತ್ತು ವಿದ್ಯುತ್ ಇಲ್ಲದೆ ಇದ್ದರೆ ಇಲ್ಲಿನ ಜನರು ನಿದ್ರೆ ಮಾಡುವುದು ತೀರ ಕಷ್ಟಕರವಾಗಿದೆ. ಪ್ರತಿಷ್ಠಿತ ವಿದ್ಯಾ ಕೇಂದ್ರದ ಡ್ರೈನೇಜ್ ನಿಂದ ಬಿಡುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಇಲ್ಲಿನ ನಿವಾಸಿಗಳಿಗೆ ಕಾಟ ಕೊಡುತ್ತಿದ್ದೆ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೊಳ್ಳೆ ನಿವಾರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಸ್ಥಳೀಯರು ನ್ಯೂಸ್ ರೂಮ್ ಪಸ್ಟ್ ಗೆ ತಿಳಿಸಿದ್ದಾರೆ.

ರಾಜ್ಯ