

ಬೆಳ್ತಂಗಡಿ:ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಕುಪ್ಪೆಟಿ ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ಉಂಟಾಗಿದ್ದು ಉಪ್ಪಿನಂಗಡಿಯಿಂದ ಬೆಳ್ತಂಗಡಿಯ ಕಡೆಗೆ ವಾಹನದಲ್ಲಿ ಸಂಚರಿಸುವ ಸವಾರರಿಗೆ ಬಹಳ ತೊಂದರೆಗೆ ಒಳಾಗಾಗುತ್ತಿರುವ ಬಗ್ಗೆ ಸ್ಥಳೀಯರು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ಇದೀಗ ಆ ದೊಡ್ಡ ದೊಡ್ಡ ಪ್ರಮಾಣದ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರೂ ಬಿದ್ದರೆ ಪ್ರಾಣಾಪಾಯವಾಗುವ ಸಂಭವವಿರುವ ಕಾರಣಕ್ಕೆ ರಸ್ತೆಯ ಮಧ್ಯದಲ್ಲಿರುವ ಗುಂಡಿಗೆ ಎತ್ತರದ ಕಡ್ಡಿಯ ಸಹಾಯದಿಂದ ಗೋಣಿಚೀಲವನ್ನು ಇಟ್ಟಿದ್ದು ಇದು ಈ ಭಾಗದ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ಎಚ್ಚರಿಸುವ ರೀತಿಯಲ್ಲಿದೆ.
