ಚೆಂಬು ಪಂಚಾಯತ್ ವ್ಯಾಪ್ತಿಯಲ್ಲಿ ಆನೆ ಹಾವಳಿ: ತೋಟಗಳಿಗೆ ನುಗ್ಗಿ ಅಪಾರ ಕೃಷಿ ನಾಶ:ರಬ್ಬರ್  ಶೆಡ್ ದ್ವಂಸ :ದಾಳಿಯ ವೇಳೆ ಓಡಿ ಜೀವ ಉಳಿಸಿಕೊಂಡ ಕೃಷಿಕ

ಚೆಂಬು ಪಂಚಾಯತ್ ವ್ಯಾಪ್ತಿಯಲ್ಲಿ ಆನೆ ಹಾವಳಿ: ತೋಟಗಳಿಗೆ ನುಗ್ಗಿ ಅಪಾರ ಕೃಷಿ ನಾಶ:ರಬ್ಬರ್  ಶೆಡ್ ದ್ವಂಸ :ದಾಳಿಯ ವೇಳೆ ಓಡಿ ಜೀವ ಉಳಿಸಿಕೊಂಡ ಕೃಷಿಕ

 ಚೆಂಬು ಗ್ರಾಮದ ಊರುಬೈಲು ಪ್ರದೇಶದಲ್ಲಿ ಕೃಷಿಕರ ತೋಟಗಳಿಗೆ ಆನೆ ನುಗ್ಗಿ ಕೃಷಿ ನಾಶಮಾಡಿದಲ್ಲದೆ , ರಬ್ಬರ್ ಶೆಡ್ ದ್ವಂಸ ಮಾಡಿರುವ ಬಗ್ಗೆ ತಿಳಿದುಬಂದಿದೆ.

ಜು.11ರಂದು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಕೆಲಸ  ಮುಗಿಸಿ ಹಿಂತಿರುಗುತ್ತಿದ್ದ ಚೆಂಬು ಗ್ರಾಮದ ಊರುಬೈಲಿನ  ಪಾಲ್ತಾಡು ರವಿ ಎಂಬವರ  ಮೇಲೆ ಕಾಡಾನೆ ದಿಢೀರ್‌ ದಾಳಿ ನಡೆಸಲು ಯತ್ನಿಸಿದ್ದು, ವ್ಯಕ್ತಿ ತಪ್ಪಿಸಿಕೊಂಡು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.ರಬ್ಬರ್ ಕೆಲಸದ  ಶೆಡ್ಡನ್ನು ಕಾಡಾನೆ ಸಂಪೂರ್ಣ ಹಾನಿಗೊಳಿಸಿದ್ದು, ಊರುಬೈಲು ಪ್ರದೇಶದ ಹಲವು ಕೃಷಿಕರ ತೋಟದಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ರಾಜ್ಯ