ಸುಳ್ಯದಲ್ಲಿ ನಡೆದ ತ್ರೈಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಪ್ರತಿಧ್ವನಿಸಿದ ಡೆಂಗ್ಯೂ ಜ್ವರ ಭೀತಿ..ಚ

ಸುಳ್ಯದಲ್ಲಿ ನಡೆದ ತ್ರೈಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಪ್ರತಿಧ್ವನಿಸಿದ ಡೆಂಗ್ಯೂ ಜ್ವರ ಭೀತಿ..

 

 ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆ ಮತ್ತು ಅದರ ನಡವಳಿ ಪಾಲನಾ ವರದಿ ಮಂಡನೆ ಜೂ 10 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿಯೇ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರು ತಾಲೂಕಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಮಾತನಾಡಿ ಎಲ್ಲಾ ಅಧಿಕಾರಿಗಳು ಈ ವಿಷಯದ ಕುರಿತು ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ,

ಕೇವಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಬಿಟ್ಟುಕೊಡದೆ ಎಲ್ಲಾ ಅಧಿಕಾರಿಗಳು ಇದರ ಬಗ್ಗೆ ಗಮನವಹಿಸಿ ಪ್ರತೀ ಗ್ರಾಮ ಮಟ್ಟದಲ್ಲಿ ಜನಜಾಗೃತಿಗೊಳಿಸುವ ಮತ್ತು ಗ್ರಾಮ ಗ್ರಾಮಗಳಿಂದ ಡೆಂಗ್ಯೂ ಬಾಧಿತರ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಅವರು ಹೇಳಿದರು.

 ಎಂದರು.

 ಕೆಡಿಪಿ ಸಭೆಯಲ್ಲಿ ಪ್ರಥಮ ಬಾರಿಗೆ ಆಗಮಿಸಿದ  ಸಂಸದ  ಕ್ಯಾಪ್ಟನ್ ಬ್ರಿಜೇಶ್ ಚೌಟ  ಅಧಿಕಾರಿಗಳು ಪ್ರಥಮವಾಗಿ ಜನರ  ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದರು. ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗದರ್ಶನವನ್ನು ನೀಡಿದರು. 

ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನದಿ ಪರಂಬೋಕು ಮತ್ತು ರಸ್ತೆ ಪರಂಬೋಕು ಸ್ಥಳಗಳಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಕಂದಾಯ ಇಲಾಖೆ ಮತ್ತು ಸುಳ್ಯ ನಗರ ಪಂಚಾಯತ್ ನವರು ಜಂಟಿಯಾಗಿ ಸರ್ವೆ ನಡೆಸುವಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸುಳ್ಯ ಪೈಚಾರು ಸೋಣಂಗೇರಿ ರಸ್ತೆಯ ಅಗಲೀಕರಣವಾಗಿದ್ದು ರಸ್ತೆ ಸಂಭಂದಿಸಿದ  ಚರಂಡಿಯನ್ನು ಖಾಸಗಿ ವ್ಯಕ್ತಿಗಳು  ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪ್ರಸ್ತಾಪವಾಗಿ ಚರ್ಚೆ ನಡೆಯಿತು.

ಕಳೆದ ವರ್ಷದಲ್ಲಿ ನೆರೆ ಹಾವಳಿಗೆ ತುತ್ತಾದ  ಕುಲ್ಲಮೊಗ್ರ ಭಾಗದ  ನೆರೆ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆಯನ್ನು ಮಾಡಿರದ ಬಗ್ಗೆ ಚರ್ಚೆ ನಡೆಯಿತು.

 ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ ಅರ್ಹರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವ ಕುರಿತು, ತಾ

 ಅಡಿಕೆ ಹಳದಿ ರೋಗ ಸೇರಿದಂತೆ ಸುಳ್ಯದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ, ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯ ,ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿಯ ವಿಳಂಬ ಹೀಗೆ ಹಲವು ಸಮಸ್ಯೆಗಳು  ಪ್ರಸ್ತಾಪವಾಗಿ ಪರಿಹರಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

 ಸಭೆಯಲ್ಲಿ ಸುಳ್ಯ ತಾಲೂಕು ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಿ ಇ ಓ ರಾಜಣ್ಣ ಸ್ವಾಗತಿಸಿ ವಂದಿಸಿದರು.

ರಾಜ್ಯ